ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ʼಟಾಕ್ಸಿಕ್ʼ ಮುಂದಿನ ವರ್ಷ ಮಾ.19ಕ್ಕೆ ತೆರೆಗೆ ಬರಿಲಿದೆ ಎಂದು ಯಶ್ ತಮ್ಮ ʼಎಕ್ಸ್ʼ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಮೊದಲು ಫಸ್ಟ್ ಲುಕ್ ಟೀಸರ್‌ನಲ್ಲೇ ಇದೇ ಏ.10ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಘೋಷಿಸಿದ್ದರು. ಆದರೆ, ಸಿನಿಮಾದ ಶೂಟಿಂಗ್ ಇನ್ನು ಪೂರ್ತಿಯಾಗದ ಕಾರಣ, ಮುಂದಿನ ವರ್ಷ ಸಿನಿಮಾ ರಿಲೀಸ್‌ಗೆ ಚಿತ್ರತಂಡ ತೀರ್ಮಾನಿಸಿದ್ದು, ಯಶ್ ಫ್ಯಾನ್ಸ್ ಸಿನಿಮಾ ನೋಡಲು ಇನ್ನೊಂದು ವರ್ಷ ಕಾಯಬೇಕಾಗಿದೆ.
ಇಂಗ್ಲಿಷ್ ಹಾಗೂ ಕನ್ನಡದ ಜೊತೆಗೆ ಹಲವಾರು ಭಾಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಯಶ್ ನಟನೆಯ ಜೊತೆಗೆ ಕೆವಿನ್ ಫಿಲಂಸ್ ಸೇರಿ ಟಾಕ್ಸಿಕ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.





