ಧಾರವಾಡ: ತೆಲುಗಿನ ಖ್ಯಾತ ನಟ ಶ್ರೀಕಾಂತ್ ಅವರಿಂದು ಧಾರವಾಡಕ್ಕೆ ಭೇಟಿ ನೀಡಿ ಹಳೆಯ ಗೆಳೆಯರನ್ನು ಭೇಟಿ ಮಾಡಿದ್ದಾರೆ.
ಧಾರವಾಡದ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿರುವ ನಟ ಶ್ರೀಕಾಂತ್, ಹಳೆಯ ಗಳೆಯರ ಮನೆಯಲ್ಲಿ ಬೆಳಗಿನ ತಿಂಡಿ ಸೇವಿಸಿ ಖುಷಿಪಟ್ಟಿದ್ದಾರೆ.
ಮೂಲತಃ ಗಂಗಾವತಿಯವರಾದ ಶ್ರೀಕಾಂತ್, ಧಾರವಾಡ ಸಿಎಸ್‌ಐ ಕಾಲೇಜಿನಲ್ಲಿ ಕಾಮರ್ಸ್ ಪದವಿ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿಂದು ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದ ಅವರು ಸ್ವಂತ ಊರು ಗಂಗಾವತಿಗೆ ಹೊರಟಿದ್ದರು.
ಈ ವೇಳೆ ಧಾರವಾಡದ ತಮ್ಮ ಸ್ನೇಹಿತರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.





