Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಕ್ಷಯ್‍ ಅಭಿನಯದ ಎಂಟು ಚಿತ್ರಗಳಿಂದ 1000 ಕೋಟಿ ನಷ್ಟ!

ಅಕ್ಷಯ್‍ ಕುಮಾರ್ ಅಭಿನಯದ ‘ಸರ್ಫಿರಾ’ ಚಿತ್ರವು ಕೆಲವು ವಾರಗಳ ಹಿಂದೆ ಬಿಡುಗಡೆಯಾಗಿತ್ತು. ತಮಿಳಿನ ಸೂರ್ಯ ಅಭಿನಯದ ‘ಸೂರರೈ ಪೊಟ್ರು’ ಚಿತ್ರದ ರೀಮೇಕ್‍ ಆಗಿದ್ದ ‘ಸರ್ಫಿರಾ’, ಒಟ್ಟಾರೆ ಗಳಿಕೆ ಮಾಡಿದ್ದು ಎಷ್ಟು ಗೊತ್ತಾ? 24 ಕೋಟಿ ರೂ. ಮಾತ್ರ. ಅಕ್ಷಯ್‍ ಅಭಿನಯದ ಇತ್ತೀಚಿನ ಚಿತ್ರಗಳಲ್ಲೇ ಈ ಚಿತ್ರ ಅತೀ ಕಡಿಮೆ ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಷ್ಟೇ ಅಲ್ಲ, ಫ್ಲಾಪ್‍ ಆಗುತ್ತಿರುವ ಅಕ್ಷಯ್‍ ಕುಮಾರ್‍ ಅಭಿನಯದ ಎಂಟನೇ ಚಿತ್ರ ಇದಾಗಿದ್ದು, ಎಂಟು ಚಿತ್ರಗಳಿಂದ ನಿರ್ಮಾಪಕರಿಗೆ ಒಟ್ಟು ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಅಕ್ಷಯ್‍ ಕುಮಾರ್ ಅವರಿಗೆ ಸೋಲುಗಳು ಹೊಸದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್‍ ಸಾಲುಸಾಲು ಸೋಲುಗಳನ್ನು ನೋಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ‘ಬಚ್ಚನ್ ಪಾಂಡೆ’ ಚಿತ್ರದಿಂದ ಅಕ್ಷಯ್‍ ಸೋಲಿನ ಸರಪಳಿ ಶುರುವಾಯಿತು. ನಂತರ ‘ಸಾಮ್ರಾಟ್‍ ಪೃಥ್ವಿರಾಜ್‍’, ‘ರಕ್ಷಾ ಬಂಧನ್‍’, ‘ಮಿಷನ್‍ ರಾಣಿಗಂಜ್‍’, ‘ರಾಮ್‍ಸೇತು’, ‘ಸೆಲ್ಫಿ’, ‘ಬಡೆ ಮಿಯಾ ಚೋಟೆ ಮಿಯಾ’ ಮತ್ತು ‘ಸರ್ಫಿರಾ’ ಚಿತ್ರಗಳಿಂದ ನಿರ್ಮಾಪಕರಿಗೆ ಒಟ್ಟು ಸಾವಿರ ಕೋಟಿ ನಷ್ಟವಾಗಿದೆಯಂತೆ.

‘ಸರ್ಫಿರಾ’ ಚಿತ್ರವನ್ನೇ ತೆಗೆದುಕೊಂಡರೆ, ಈ ಚಿತ್ರದ ಮೊದಲ ದಿನದ ಗಳಿಕೆ ಕೇವಲ 2.40 ಕೋಟಿ ರೂ. ಅಷ್ಟಾಗಿತ್ತು. ‘ಸರ್ಫಿರಾ’ ಚಿತ್ರವು 80 ಕೋಟಿ ರೂ ಬಜೆಟ್‍ನಲ್ಲಿ ನಿರ್ಮಾನವಾದ ಚಿತ್ರವಾಗಿದ್ದು, ಮೊದಲ ದಿನ ಕೇವಲ 2.40 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ಮುಂದುವರೆದರೆ, ಚಿತ್ರ 10 ಕೋಟಿ ರೂ. ಸಹ ಸಂಗ್ರಹಿಸುತ್ತದೋ, ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಚಿತ್ರವು ಅಂತಿಮವಾಗಿ 29 ಕೋಟಿ ರೂ. ಸಂಗ್ರಹ ಮಾಡುವಲ್ಲಿ ಯಶಸ್ವಿಯಾಯಿತು. ಇದು ಜಾಗತಿಕ ಬಾಕ್ಸ್ ಆಫೀಸ್‍ನ ಲೆಕ್ಕಾಚಾರ ಎಂಬುದು ಗೊತ್ತಿರಲಿ. ಇದರಲ್ಲಿ ಕಳೆದ ನಿರ್ಮಾಪಕರಿಗೆ 15 ಕೋಟಿ ರೂ. ಸಿಕ್ಕರೆ ಅದೇ ಹೆಚ್ಚು.

‘ಸೂರರೈ ಪೊಟ್ರು’ ಚಿತ್ರವನ್ನು ನಿರ್ದೇಶಿಸಿದ್ದ ಸುಧಾ ಕೊಂಗರಾ ಅವರೇ ‘ಸರ್ಫಿರಾ’ ಚಿತ್ರವನ್ನು ನಿರ್ದೇಶಿಸಿದ್ದರು. ಅರುಣ್‍ ಭಾಟಿಯಾ, ಸೂರ್ಯ, ಜ್ಯೋತಿಕಾ ಮುಂತಾದವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್‍ ಕುಮಾರ್‍ ಒಡೆತನದ ಕೇಪ್‍ ಆಫ್‍ ಗುಡ್‍ ಫಿಲಂಸ್‍ ಸಹ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.

Tags: