Mysore
22
broken clouds

Social Media

ಸೋಮವಾರ, 26 ಜನವರಿ 2026
Light
Dark

ಕಷ್ಟಪಟ್ಟು ಮೇಲೆ ಬಂದಿದ್ರು, ಆದ್ರೆ ಜೀವನ ಹಾಳುಮಾಡಿಕೊಂಡ್ರು : ದರ್ಶನ್‌ ಬಗ್ಗೆ ಸಾಫ್ಟ್‌ ಕಾರ್ನರ್‌ ತೋರಿದ ರಮ್ಯಾ

Darshan fans troll: Film Industry for Rights and Equality supports actress Ramya

ಬೆಂಗಳೂರು : ನಟ ದರ್ಶನ್‌ ಅವರು ಲೈಟ್ಬಾಯ್‌ ಆಗಿ ಬಂದ್ರೂ ಕಷ್ಟಪಟ್ಟು ಮೇಲೆ ಬಂದಿದ್ರು. ಆದರೆ ಜೀವನ ಹಾಳುಮಾಡಿಕೊಂಡ್ರು ಎಂದು ನಟಿ ರಮ್ಯಾ ಕೊಲೆ ಆರೋಪದ ಮೇಲೆ ಜೈಲು ಸೇರಿರುವ ದರ್ಶನ್‌ ಬಗ್ಗೆ ಸಾಫ್ಟ್‌ ಕಾರ್ನರ್‌ ತೋರಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ ಅವರು, ನಾನು ಹೇಳಬೇಕಾದ್ದನ್ನೆಲ್ಲ ಹೇಳಿದ್ದೀನಿ. ದೂರು ಕೊಟ್ಮೇಲೆ ಬ್ಯಾಡ್ ಕಾಮೆಂಟ್ಸ್ ಬರ್ತಿಲ್ಲ. ಎಷ್ಟೋ ಜನ ಪೋನ್ ಸ್ವಿಚ್ ಆಫ್ ಮಾಡಿ ಮನೆ ಬಿಟ್ಟಿದ್ದಾರೆ. ಇನ್ನಷ್ಟು ಮಂದಿ ಅರೆಸ್ಟ್ ಆಗಿದ್ದಾರೆ. ದರ್ಶನ್ ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಬಂದವರಾಗಿದ್ದರೂ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ರು. ಆದ್ರೆ ಜೀವನ ಹಾಳು ಮಾಡಿಕೊಂಡ್ರು. ಹೀಗೆ ಆಗದೇ ಇದ್ದಿದ್ದರೇ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳಿಯಬಹುದಿತ್ತು ಎಂದರಲ್ಲದೇ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸುವುದಾಗಿ ಹೇಳಿದರು.

ಸುಪ್ರೀಂ ತೀರ್ಪಿನಿಂದ ರೇಣುಕಾಸ್ವಾಮಿ ಹೆಂಡತಿ ಮಗುವಿಗೆ ನ್ಯಾಯ ಸಿಕ್ಕಿದೆ. ಈ ಬೆಳವಣಿಗೆಯಿಂದ ಹೆಣ್ಣುಮಕ್ಕಳಿಗೆ ಧೈರ್ಯ ಬಂದಿದೆ. ಎಲ್ಲ ಒಳ್ಳೆಯದಾಗಿದೆ ಅಂದುಕೊಳ್ತೀನಿ ಅಂತ ಹೇಳಿದ್ದಾರೆ.

ಸಿನಿಮಾ ಗೆಲ್ಲಲೂ ಸ್ಟಾರ್‌ ನಟರೇ ಬೇಕಿಲ್ಲಿ
ದುಬಾರಿ ಬಜೆಟ್, ಸ್ಟಾರ್ ನಟರು ಇಲ್ಲದೇ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ಸು ಫ್ರಂ ಸೋ ಸಿನಿಮಾ ಸಾಕ್ಷಿ ಎಂದಿದ್ದಾರೆ ನಟಿ ರಮ್ಯಾ. ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ, ಸಿನಿಮಾ ರಂಗ ಪಾತಾಳಕ್ಕೆ ಬೀಳುತ್ತದೆ. ಸ್ಟಾರ್ ನಟರು ಸಿನಿಮಾ ಮಾಡದೇ ಇದ್ದರೆ ಸಿನಿಮಾ ರಂಗಕ್ಕೆ ನಷ್ಟಕ್ಕೆ ತಿರುಗುತ್ತಾ? ಎಂದು ಕೇಳಲಾದ ಪ್ರಶ್ನೆಗೆ ರಮ್ಯಾ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ. ಸು ಫ್ರಂ ಸೋನಲ್ಲಿ ಯಾವ ಸ್ಟಾರ್ ನಟರು ಇದ್ದಾರೆ? ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಅಂದಿದ್ದಾರೆ ರಮ್ಯಾ.

Tags:
error: Content is protected !!