Mysore
18
scattered clouds

Social Media

ಗುರುವಾರ, 01 ಜನವರಿ 2026
Light
Dark

ದರ್ಶನ್‌-ಪ್ರೇಮ್‌ ಸಿನಿಮಾ ಮಾಡ್ತಾರೆ ಡೌಟೇ ಇಲ್ಲ: ರಕ್ಷಿತಾ

ಬೆಂಗಳೂರು: ಯಾವ ಬ್ಯಾನರ್‌ ಆದರೂ ಸರೀನೆ ದರ್ಶನ್‌ ಹಾಗೂ ಪ್ರೇಮ್‌ ಸಿನಿಮಾ ಮಾಡೇ ಮಾಡ್ತಾರೆ ಅದರ ಬಗ್ಗೆ ಡೌಟೇ ಇಲ್ಲ ಎಂದು ಸ್ಯಾಂಡಲ್‌ವುಡ್‌ ಕ್ರೇಜಿಕ್ವೀನ್‌ ರಕ್ಷಿತಾ ಹೇಳಿದ್ದಾರೆ.

ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ವೇಳೆ ಮಾತನಾಡಿದ ರಕ್ಷಿತಾ, ಇಬ್ಬರ ಮಧ್ಯ ಯಾವುದೇ ಬಿನ್ನಭಿಪ್ರಾಯವಿಲ್ಲ. ಇಬ್ಬರು ಒಟ್ಟಿಗೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡ್ತಾರೆ ಎಂದು ಹೇಳಿದರು.

ಇದೇ ವೇಳೆ ಮಗ ರಾಣಾ ಮದುವೆಗೆ ಬರುವಂತೆ ಇನ್ವಿಟೇಷನ್‌ ಕಾರ್ಡ್‌ ಕೊಟ್ಟಿದ್ದೀನಿ. ಮದುವೆಗೆ ಬರ್ತೀನಿ ಅಂತ ಹೇಳಿದ್ದಾನೆ ಎಂದು ತಿಳಿಸಿದರು.

ರೇಣುಕಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ರಕ್ಷಿತಾ, ಅದೊಂದು ಕೆಟ್ಟಗಳಿಗೆ ಅದರಿಂದ ಮೊದಲು ಆಚೆ ಬರಲಿ. ದರ್ಶನ್‌ಗಾಗಿ ವಿಜಯಲಕ್ಷ್ಮೀ ತುಂಬಾ ಕಷ್ಟಪಟ್ಟಿದ್ದಾರೆ ಎಂದು ತಿಳಿಸಿದರು.

ಸೊಶಿಯಲ್‌ ಮೀಡಿಯಾ ಒಳ್ಳೆದಕ್ಕೂ ಇದೆ ಕೆಟ್ಟದಕ್ಕೂ ಇದೆ. ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿರುತ್ತದೆ. ನಾನು ಏನಾದರೂ ಹೇಳಬೇಕು ಅಂದರೆ ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತೇನೆ ಎಂದು ಹೇಳಿದರು.

Tags:
error: Content is protected !!