Mysore
21
overcast clouds

Social Media

ಗುರುವಾರ, 01 ಜನವರಿ 2026
Light
Dark

ಸೋನು ನಿಗಮ್ ಹಾಡಿದ ಹಾಡನ್ನು ಬೇರೆಯವರಿಂದ ಹಾಡಿಸಲು ನಿರ್ಧಾರ …

nidradevi next door kannada film song controversy

ಕನ್ನಡ ಮತ್ತು ಕನ್ನಡಿಗರ ವಿರುದ್ಧ ಬಾಲಿವುಡ್‍ ಗಾಯಕ ಸೋನು ನಿಗಮ್‍ ಆಡಿದ ಅವಹೇಳನಕಾರಿ ಮಾತನ್ನು ವಿರೋಧಿಸಿ, ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರತಂಡವು ‘ಮನಸ್ಸು ಹಾಡ್ತದೆ ವಯಸ್ಸು ಕಾಡ್ತದೆ …’ ಎಂಬ ಸೋನು ನಿಗಮ್‍ ಹಾಡಿದ ಹಾಡನ್ನು ಬೇರೆಯವರಿಂದ ಹಾಡಿಸಲು ತೀರ್ಮಾನಿಸಿತ್ತು. ಈಗ ‘ನಿದ್ರಾದೇವಿ Next Door’ ಹಾಡನ್ನು ಬೇರೆಯವರಿಂದ ಹಾಡಿಸಲು ತೀರ್ಮಾನಿಸಿದೆ.

‘ನಿದ್ರಾದೇವಿ Next Door’ ಚಿತ್ರಕ್ಕಾಗಿ ಸೋನು ನಿಗಮ್‍ ಹಾಡಿದ್ದ ‘ನೀ ನನ್ನ’ ಎಂಬ ಹಾಡನ್ನು ಇತ್ತೀಚೆಗೆ ನಟ ಗಣೇಶ್‍ ಬಿಡುಗಡೆ ಮಾಡಿದರು. ಹಾಡು ಬಿಡುಗಡೆಯಾದ ಸ್ವಲ್ಪ ಸಮಯದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆಯವರಿಂದ ಹಾಡಿಸಲು ಚಿತ್ರತಂಡ ತೀರ್ಮಾನಿಸಿದೆ. ಯೂಟ್ಯೂಬ್‍ನಲ್ಲಿರುವ ಹಾಡು ಸದ್ಯ ಸೋನು ಧ್ವನಿಯಲ್ಲಿದ್ದು, ಆದಷ್ಟು ಬೇಗ ಬೇರೆಯವರಿಂದ ಹಾಡಿಸಲು ಚಿತ್ರತಂಡ ಮುಂದಾಗಿದೆ.

ಈ ಕುರಿತು ಮಾತನಾಡಿರುವ ನಿರ್ಮಾಪಕ ಜಯರಾಮ ದೇವಸಮುದ್ರ, ’ನಕುಲ್ ಅಭಯಂಕರ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ನೀ ನನ್ನ …’ ಹಾಡನ್ನು ರಾಘವೇಂದ್ರ ಕಾಮತ್ ಅವರು ಬರೆದಿದ್ದಾರೆ. ಸೋನು ನಿಗಂ ಹಾಡಿದ್ದಾರೆ. ಆರು ತಿಂಗಳ ಹಿಂದೆಯೇ ಈ ಹಾಡು ಸಿದ್ದವಾಗಿತ್ತು. ಆನಂತರ ಸೋನು ನಿಗಂ ಅವರ ವಿವಾದ ನಡೆದಿದ್ದು. ನಮಗೆ ಎಲ್ಲದಕ್ಕಿಂತ ಭಾಷೆ ಮುಖ್ಯ. ಆ ನಿಟ್ಟಿನಲ್ಲಿ ಸೋನು ನಿಗಂ ಅವರ ಧ್ವನಿಯಲ್ಲಿ ಬಂದಿರುವ ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳುವುದಿಲ್ಲ. ಬೇರೆ ಗಾಯಕರಿಂದ ಈ ಹಾಡನ್ನು ಹಾಡಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಹಾಡು ಬಿಡುಗಡೆ ಮಾಡಿದ ಗಣೇಶ್‍, ‘ಭಾಷೆಯಿಂದ ನಾವೇ ಹೊರತು.‌ ನಮ್ಮಿಂದ ಭಾಷೆ ಅಲ್ಲ. ಹಾಗಾಗಿ, ಬಹಳ‌ ಸೊಗಸಾಗಿ ಮೂಡಿ ಬಂದಿರುವ ಈ ಹಾಡನ್ನು ನಿರ್ಮಾಪಕರು, ಕನ್ನಡ ಗಾಯಕರಿಂದಲೇ ಪುನಃ ಹಾಡಿಸುತ್ತಾರೆ ಎಂಬ ಭರವಸೆ ನನಗಿದೆ’ ಎಂದು ಗಣೇಶ್‍ ಸಹ ಹೇಳಿದರು.

‘ನಿದ್ರಾದೇವಿ next door’ ಸಿನಿಮಾದಲ್ಲಿ ಪ್ರವೀಣ್ ಶೆಟ್ಟಿಗೆ ಜೋಡಿಯಾಗಿ ರಿಷಿಕಾ ನಟಿಸಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಶ್ರುತಿ ಹರಿಹರನ್, ಹಿರಿಯ ನಟ ಕೆ.ಎಸ್.ಶ್ರೀಧರ್, ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸುರಾಗ್‍ ಸಾಗರ್‍ ನಿರ್ದೇಶನ ಮಾಡಿದ್ದು, ಸುರಮ್‍ ಮೂವೀಸ್‍ ಪ್ರೊಡಕ್ಷನ್ ಬ್ಯಾನರ್‍ ಅಡಿಯಲ್ಲಿ ಜಯರಾಮ್‍ ದೇವಸಮುದ್ರ ನಿರ್ಮಿಸಿದ್ದಾರೆ.

Tags:
error: Content is protected !!