ಬೆಂಗಳೂರು: ಸ್ಯಾಂಡಲ್‌ವುಡ್‌ನ ಮತ್ತೊಂದು ಕ್ಯೂಟ್ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ಮುಳುಗಿದ್ದ ತರುಣ್ ಸುಧೀರ್ ಹಾಗೂ ಸೋನಲ್ ಜೋಡಿ ತಮ್ಮ ಮ್ಯಾಟರ್ ಅನ್ನು ರಹಸ್ಯವಾಗಿಯೇ ಇಟ್ಟಿತ್ತು. ಮದುವೆಗೆ ಬೇಕಿರುವ ತಯಾರಿಗಳನ್ನು ಕೂಡ ಗುಟ್ಟಾಗಿಯೇ ಮಾಡಿಕೊಳ್ಳುತ್ತಿದ್ದರು. ಆದರೂ ಇವರಿಬ್ಬರ ಮದುವೆ ವಿಚಾರ ಹೊರಬಂದು ಲೀಕ್ ಆಗಿತ್ತು.
ಕೆಲ ದಿನಗಳ ಹಿಂದೆ ಸೋನಾಲ್ ಮಂಥೆರೋ ಜೊತೆ ಮದುವೆ ಆಗುತ್ತಿರುವ ವಿಷಯವನ್ನು ನಟ ತರುಣ್ ಸುಧೀರ್ ಅವರೇ ಅಧಿಕೃತಗೊಳಿಸಿದ್ದರು.
ಈ ಜೋಡಿ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಅದಕ್ಕೂ ಮುನ್ನ ಇಂದು ಚಿತ್ರರಂಗದ ಗಣ್ಯರಿಗಾಗಿ, ಆತ್ಮೀಯರರಿಗಾಗಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನವೇ ಮದುವೆ ಸಂಭ್ರಮ ಹಾಗೂ ಶಾಸ್ತ್ರಗಳು ಆರಂಭ ಆಗಿವೆ.
ಆರತಕ್ಷತೆಗೂ ಮುನ್ನ ತರುಣ್ ಸುಧೀರ್ ಹಾಗೂ ಸೋನಲ್ ಮಾಂಥೆರೋ ಹಳದಿ ಶಾಸ್ತ್ರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ತರುಣ್-ಸೋನಾಲ್ ಹಸೆಮಣೆ ಏರುವುದನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.
ಹಳದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನಟರಾದ ಶರಣ್, ನೆನಪಿರಲಿ ಪ್ರೇಮ್ ಸೇರಿದಂತೆ ಹಲವರು ಜೋಡಿಯ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರೇಮ್ ಹಾಗೂ ಶರಣ್ ಕೂಡ ಹಳದಿ ಹಚ್ಚಿಕೊಂಡು ಖುಷಿ ಪಟ್ಟಿದ್ದಾರೆ.





