ತಮಿಳುನಾಡು: ತಮಿಳು ಸ್ಟಾರ್ ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರಿಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅದಿತಿ ಹಾಗೂ ಸಿದ್ಧಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಮೊದಲ ಮದುವೆಗೆ ಡಿವೋರ್ಸ್ ನೀಡಿದ ಬಳಿಕ ಸಿನಿಮಾವೊಂದರದಲ್ಲಿ ಪರಿಚಯವಾಗಿದ್ದ ಇವರಿಬ್ಬರು ಇಂದು ಹಸೆಮಣೆ ಏರಿದ್ದಾರೆ.
400 ವರ್ಷಗಳ ಹಿಂದಿನ ಪುರಾತನ ವನಪರ್ತಿ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾದ ಈ ಜೋಡಿಯು, ವಿವಾಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಫೋಟೋ ಶೇರ್ ಮಾಡಿರುವ ಅದಿತಿ ರಾವ್ ಹೈದರಿ ನೀವೇ ನನ್ನ ಸೂರ್ಯ, ನೀವೇ ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು ಎಂದು ಬರೆದುಕೊಂಡು ಖುಷಿ ಹಂಚಿಕೊಂಡಿದ್ದಾರೆ.
ನವ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.





