Mysore
18
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಕೊನೆಗೂ ಶ್ರೀಮುರಳಿ ಅಭಿನಯದ ‘ಬಘೀರ’ ಬಿಡುಗಡೆ ದಿನಾಂಕ ಘೋಷಣೆ

ಶ್ರೀಮುರಳಿ ಅಭಿನಯದ ‘ಬಘೀರ’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಚಿತ್ರವು ಅಕ್ಟೋಬರ್ 31ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ಮಿಸುತ್ತಿರುವ ಹೊಂಬಾಳೆ ಫಿಲಂಸ ಘೋಷಣೆ ಮಾಡಿದೆ.

ಶ್ರೀಮುರಳಿ ಅಭಿನಯದ ಚಿತ್ರವೊಂದು ಬಿಡುಡೆಯಾಗದೆ ಮೂರು ವರ್ಷಗಳೇ ಆಗಿವೆ. ಅವರ ಕೊನೆಯ ಚಿತ್ರ ‘ಮದಗಜ’ ಬಿಡುಗಡೆಯಾಗಿದ್ದು 2021ರಲ್ಲಿ. ಅದಾದ ನಂತರ ಅವರು ‘ಬಘೀರ’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಈ ಚಿತ್ರವು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು.

‘ಬಘೀರ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲೇ ಅವರಿಗೆ ಎರಡು ಬಾರಿ ಏಟು ಬಿದ್ದಿದೆ. ಅದೇ ಕಾರಣಕ್ಕೆ ಚಿತ್ರ ಬಿಡುಗಡೆ ಆಗುವುದಕ್ಕೆ ಸಾಕಷ್ಟು ವಿಳಂಬವಾಗಿದೆ. ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದು, ಕೊನೆಯ ಹಂತ ಚಿತ್ರೀಕರಣ ಆರಂಭವಾದಾಗ, ಶ್ರೀಮುರಳಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು.

ಕೆಲವು ತಿಂಗಳುಗಳ ಹಿಂದೆ ವಿಜಯ್ ರಾಘವೇಂದ್ರ ಅಭಿನಯದ ‘ಗ್ರೇ ಗೇಮ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾಧ್ಯಮದವರ ಜೊತೆಗೆ ಮಾತನಾಡಿದ್ದ ಅವರು, ಏಟಿನಿಂದ ಸುಧಾರಿಸಿಕೊಳ್ಳುವುದಕ್ಕೆ ಇನ್ನೊಂದು ತಿಂಗಳು ಬೇಕು ಎಂದಿದ್ದರು. ಆ ನಂತರ ಒಂದು ತಿಂಗಳ ಚಿತ್ರೀಕರಣ. ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು, ಪ್ರಚಾರ ಅಂತ ಚಿತ್ರ ಬಿಡುಗಡೆ್ಗೆ ನಾಲ್ಕು ತಿಂಗಳು ಬೇಕು, ಬಹುಶಃ ಈ ವರ್ಷದ ಕೊನೆಯಲ್ಲಿ ‘ಬಘೀರ’ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಯಾವಾಗ ಚಿತ್ರ ಬರಬಹುದು ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, ಈ ಬಗ್ಗೆ ಚಿತ್ರತಂಡ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದರು.

ಈಗ ಚಿತ್ರದ ಬಿಡುಗಡೆ ದಿನಾಂಕವನ್ನು ಕೊನೆಗೂ ಹೊಂಬಾಳೆ ಫಿಲಂಸ್‍ ಘೋಷಿಸಿದೆ. ಅಕ್ಟೋಬರ್ 31ರಂದು ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ‘ಬಘೀರ’ ಚಿತ್ರವನ್ನು ಹೊಂಬಾಳೆ ಫಿಲಂಸ್‍ ಬ್ಯಾನರ್‍ ಅಡಿ ವಿಜಯ್‍ ಕಿರಗಂದೂರು ನಿರ್ಮಿಸಿದರೆ, ಡಾ. ಸೂರಿ ನಿರ್ದೇಶನ ಮಾಡಿದ್ದಾರೆ. ಇನ್ನು, ಶ್ರೀಮುರಳಿ ಚಿತ್ರಜೀವನಕ್ಕೆ ‘ಉಗ್ರಂ’ ಚಿತ್ರದ ಮೂಲಕ ದೊಡ್ಡ ತಿರುವು ನೀಡಿದ್ದ ಪ್ರಶಾಮತ್‍ ನೀಲ್‍, ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ.

‘ಬಘೀರ’ ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್‍ ನಟಿಸಿದ್ದು, ಮಿಕ್ಕಂತ್‍ ಅಚ್ಯುತ್‍ ಕುಮಾರ್‍, ಪ್ರಕಾಶ್‍ ರೈ, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಎ.ಜೆ. ಶೆಟ್ಟಿ ಛಾಯಾಗ್ರಹಣ ಮತ್ತು ಅಜನೀಶ್‍ ಲೋಕನಾಥ್‍ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತವಿದೆ.

Tags: