ಬೆಂಗಳೂರು: ಕಾನೂನು ಬಾಹಿರವಾಗಿ ಮಗುವೊಂದನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಿ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಇನ್ಸ್ಟಾ ಗ್ರಾಂ ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸೋನು ಗೌಡ ಸದಾ ಚರ್ಚೆಯಲ್ಲಿರುವ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಸಿಲುಕಿದ್ದ ಇವರಿಗೆ ಮಗು ದತ್ತು ಪ್ರಕರಣ ಸಂಕಷ್ಟ ತಂದೊಡ್ಡಿದೆ.
ಸೋನು ಶ್ರೀನಿವಾಸ್ ಗೌಡ ಅವರು ರಾಯಚೂರು ಮೂಲದ ಬಾಲಕಿಯನ್ನು ದತ್ತು ಪಡೆದಿದ್ದರು. ಆ ಬಾಲಕಿಗೆ ಏಳು ವರ್ಷ. ತಂದೆ-ತಾಯಿಯ ಒಪ್ಪಿಗೆ ಪಡೆದು ಸೋನು ಮಗುವನ್ನು ದತ್ತು ಪಡೆದಿದ್ದರು. ಇಲ್ಲಿ ಯಾವುದೇ ನಿಯಮಗಳೂ ಫಾಲೋ ಆಗಿರಲಿಲ್ಲ. ಇದನ್ನು ತಿಳಿದ ಬಳಿಕ ಸೋನು ವಿರುದ್ಧ ಕೇಸ್ ದಾಖಲಾಯ್ತು. ಆ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿ ಸೋನು ಅವರನ್ನು ಬಂಧಿಸಿ, ಬಳಿಕ ಆಕೆಯನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು.
ಮಗು ದತ್ತು ಪಡೆಯುವ ವಿಷಯದಲ್ಲಿ ಯಾವುದೇ ಕಾನೂನಿನ ಪಾಲನೆಯಾಗಿಲ್ಲ ಎಂಬ ಮಾಹಿತಿ ಮನಗಂಡು ಇಲ್ಲಿನ ಸಿಜೆಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಲಿದೆ.
ಸದ್ಯ ಸೋನು ಶ್ರೀನಿವಾಸ ಗೌಡ ಅವರು ಜಾಮೀನಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.





