Mysore
26
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಶಿವರಾಜಕುಮಾರ್ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ

ಶಿವರಾಜಕುಮಾರ್‍ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿರುವುದಿಲ್ಲ, ಮನೆಯತ್ತ ಬರಬೇಡಿ, ಇದ್ದೇಲ್ಲೇ ಹಾರೈಸಿ ಎಂದು ಮೊದಲೇ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದರು. ಹಾಗಾಗಿ, ಯಾವುದೇ ಸಂಭ್ರಮಾಚರಣೆ ಇರಲಿಲ್ಲ.

ಆದರೆ, ಶಿವರಾಜಕುಮಾರ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಭೈರತಿ ರಣಗಲ್‍’ ಚಿತ್ರದ ಟೀಸರ್‍, ‘45’ ಚಿತ್ರದ ಮೊದಲ ನೋಟ, ‘ಉತ್ತರಕಾಂಡ’ ಚಿತ್ರದ ಫಸ್ಟ್ ಲುಕ್‍ ಬಿಡುಗಡೆಯಾಗಿದೆ. ಇನ್ನು, ‘ಶಿವಗಣ’, ‘ದಳವಾಯಿ, ‘ಜಾವ’ ಮುಂತಾದ ಚಿತ್ರಗಳು ಘೋಷಣೆಯಾಗಿವೆ.
ಕಳೆದ ವರ್ಷ ಶಿವರಾಜಕುಮಾರ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಇನ್ಸ್ಪೆಕ್ಟರ್ ವಿಕ್ರಮ್ ರಿಟರ್ನ್ಸ್’, ಅಜೇಯ್ ರಾವ್ ಜೊತೆಗೆ ಒಂದು ಚಿತ್ರ, ‘ಧೀರ’ ಸೇರಿದಂತೆ ಕೆಲವು ಚಿತ್ರಗಳು ಘೋಷಣೆಯಾಗಿದ್ದವು. ಈ ಒಂದು ವರ್ಷದಲ್ಲಿ ಸಂದೇಶ್‍ ನಾಗರಾಜ್‍ ನಿರ್ಮಾಣದಲ್ಲಿ ಒಂದು ಚಿತ್ರ, ಆರ್‍. ಚಂದ್ರು ನಿರ್ಮಾಣದಲ್ಲಿ ಒಂದು ಚಿತ್ರ, ದಿನಕರ್ ತೂಗುದೀಪ ನಿರ್ದೇಶನದ ಒಂದು ಚಿತ್ರ, ಹೇಮಂತ್‍ ರಾವ್ ನಿರ್ದೇಶನದ ‘ಭೈರವನ ಕೊನೆಯ ಪಾಠ’, ಕಾರ್ತಿಕ್‍ ಅದ್ವೈತ್‍ ನಿರ್ದೇಶನದ ಹೊಸ ಚಿತ್ರಗಳು ಘೋಷಣೆಯಾಗಿವೆ.

ಇಷ್ಟೊಂದು ಚಿತ್ರಗಳ ಪೈಕಿ ‘ಭೈರವನ ಕೊನೆಯ ಪಾಠ’ ಚಿತ್ರ ಮೊದಲು ಶುರುವಾಗುವ ಸಾಧ್ಯತೆ. ಈಗಾಗಲೇ ಇತ್ತೀಚೆಗೆ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್‍, ಭೈರವ ಎಂಬ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಆಗಸ್ಟ್ನಿಂದ ಚಿತ್ರೀಕರಣ ಶುರುವಾಗಲಿದೆ.

ಇನ್ನು, ಆಗಸ್ಟ್ 15ರಂದು ‘ಭೈರತಿ ರಣಗಲ್’ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಇಂದು ಚಿತ್ರದ ಟೀಸರ್‍ ಬಿಡುಗಡೆ ಆಗಿದ್ದು, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಆಗಸ್ಟ್ 15ರಂದು ಬಿಡುಗಡೆ ಆಗಬೇಕಿದ್ದ ಚಿತ್ರ, ಇದೀಗ ಸೆಪ್ಟೆಂಬರ್‍ಗೆ ಮುಂದೂಡಲಾಗಿದೆ.

Tags:
error: Content is protected !!