ಮೈಸೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ಡಾಕ್ಟರ್ ಧನ್ಯತಾ ಜೊತೆ ಇಂದು ಶುಭ ಮುಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ನಟ ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿಯ ವಿವಾಹ ಅದ್ಧೂರಿಯಾಗಿ ನೆರವೇರಿತು.
ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಾಂಗಲ್ಯಧಾರಣೆ ನಡೆಯಿತು.
ಡಾಲಿ ಧನಂಜಯ್ ಮದುವೆಗೆ ಕುಟುಂಬಸ್ಥರು, ಮಠಾಧೀಶರು ಹಾಗೂ ಆಪ್ತರು ಸಾಕ್ಷಿಯಾದರು. ನವಜೋಡಿಗೆ ಅಕ್ಷತೆ ಹಾಕಿ ಹರಸಿದರು.
ಡಾಲಿ ಮದುವೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ನಟ ಶಿವರಾಜ್ ಕುಮಾರ್, ನಟಿ ರಮ್ಯಾ, ವಸಿಷ್ಠ ಸಿಂಹ, ಯುವರಾಜ್ ಕುಮಾರ್, ಸಪ್ತಮಿಗೌಡ, ವಿನಯ್ ರಾಜ್, ಶ್ರುತಿ, ದಿವ್ಯಾ ಉರುಡುಗ ಸೇರಿದಂತೆ ಹಲವರು ಪಾಲ್ಗೊಂಡು ನವಜೋಡಿಗೆ ವಿಶ್ ಮಾಡಿದರು.
ಇನ್ನು ಧನಂಜಯ್ ಹಾಗೂ ಧನ್ಯತಾ ಮದುವೆಗೆ ಆಗಮಿಸಿದ್ದ ಅತಿಥಿಗಳಿಗಾಗಿ 25ಕ್ಕೂ ಹೆಚ್ಚು ಬಗೆ ಬಗೆಯ ವಿಶೇಷ ಖಾದ್ಯಗಳನ್ನು ಬಡಿಸಲಾಯಿತು. ಕುಟುಂಬಸ್ಥರು, ವಿಐಪಿ, ವಿವಿಐಪಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 800 ಮಂದಿ ಬಾಣಸಿಗರಿಂದ ಅಡುಗೆ ತಯಾರಿಸಲಾಗಿತ್ತು.





