ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 19 ಮಂದಿಯ ಬಂಧನವಾಗಿದೆ. ಪವಿತ್ರಾ ಗೌಡರಿಗೆ ಅಶ್ಲೀಲ ಮೆಸೆಜ್ ಕಳುಹಿಸಿದ ಕಾರಣಕ್ಕಾಗಿ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದ್ದು, ಈ ಇಬ್ಬರ ನಡುವಿನ ಚಾಟ್ ಹಿಸ್ಟರಿ ಬಯಲಾಗಿದೆ.
ನಟಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕಳುಹಿಸಿದ್ದ ಎನ್ನಲಾದ ಅಶ್ಲೀಲ ಮೆಸೆಜ್ ರಹಸ್ಯ ಬಯಲಾಗಿದ್ದು, ಕಳೆದ ಐದು ತಿಂಗಳಿನಿಂದ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೆಜ್ ಮಾಡುತ್ತಿದ್ದ ಎನ್ನುವ ಸತ್ಯ ಬಯಲಿಗೆ ಬಂದಿದೆ.
ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ 200ಕ್ಕೂ ಅಧಿಕ ಅಶ್ಲೀಲ್ ಮೆಸೆಜ್‌ಗಳನ್ನು ರೇಣುಕಾಸ್ವಾಮಿ ಮಾಡಿದ್ದ ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ. ಆದರೆ ಇದ್ಯಾವುದಕ್ಕೂ ಪವಿತ್ರಾ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೇಣುಕಾಸ್ವಾಮಿ ತನ್ನ ಖಾಸಗಿ ಅಂದ ಫೋಟೋವನ್ನು ಹಂಚಿಕೊಂಡಿದ್ದ.
ಇದರಿಂದ ಕೋಪಗೊಂಡ ಪವಿತ್ರಾ ಗೌಡ ಘಟನೆಯ ವಿಚಾರವನ್ನು ತನ್ನ ಸಹಾಯಕ ಮೋಹನ್‌ಗೆ ತಿಳಿಸಿದ್ದಾರೆ. ಪವನ್, ಪವಿತ್ರಾ ಗೌಡ ರೀತಿಯಲ್ಲಿ ಮೆಸೆಜ್ ಮಾಡಿ ರೇಣುಕಾಸ್ವಾಮಿ ಜತೆ ಮಾತನಾಡಿದ್ದಾನೆ. ಇದರಿಂದ ಖುಷಿಗೊಂಡ ರೇಣುಕಾಸ್ವಾಮಿ ಪವನ್ ಹೇಳಿದಂತೆ ತನ್ನ ಫೋಟೋವನ್ನು ಹಂಚಿಕೊಂಡಿದ್ದಾನೆ. ಫೋಟೋದೊಂದಿಗೆ ಜಾಡು ಹಿಡಿದ ಡಿ ಗ್ಯಾಂಗ್, ಅಲ್ಲಿಂದ ರೇಣುಕಾಸ್ವಾಮಿ ಹತ್ಯೆಯಲ್ಲಿ ಈ ವಿಚಾರಕ್ಕೆ ತಿಲಾಂಜಲಿ ಬಿಟ್ಟಿದ್ದಾರೆ.





