ಬಾಲಿವುಡ್‌ನ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ಅವರು ನಿಧನರಾಗಿದ್ದಾರೆ.
ಮುಂಬೈ ನಿವಾಸದಲ್ಲಿ ಮೇ.10ರಂದು ಬೆಳಿಗ್ಗೆ ಅವರು ನಿಧನರಾಗಿದ್ದು, ವಿಕ್ರಮ್ ಗಾಯಕ್ವಾಡ್ ನಿಧನಕ್ಕೆ ಬಾಲಿವುಡ್ ತಾರೆಯರು ಸಂತಾಪ ಸೂಚಿಸಿದ್ದಾರೆ.
ವಿಕ್ರಮ್ ಗಾಯಕ್ವಾಡ್ ನಿಧನಕ್ಕೆ ಕಾರಣವೇನು ಎಂಬುದು ರಿವೀಲ್ ಆಗಿಲ್ಲ. ಅವರ ನಿಧನಕ್ಕೆ ಅಮೀರ್ ಖಾನ್, ರಣವೀರ್ ಸಿಂಗ್, ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಬಾಲಿವುಡ್ ಸಿನಿಮಾ ತಾರೆಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ವಿಕ್ರಮ್ ಗಾಯಕ್ವಾಡ್ ಸಂಜು, ಪಿ.ಕೆ.ದಂಗಲ್, ರಂಗ್ ದೆ ಬಸಂತಿ, 3 ಈಡಿಯಟ್ಸ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.





