ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರು ಇದೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೆ ಕೊಡವ ಭಾಷೆಯಲ್ಲಿ ಸಂದೇಶವೊಂದನ್ನು ಕಳುಹಿಸಿದ್ದಾರೆ.
ಮೂಲತಃ ಕೊಡಗಿನವರಾದ ಅವರು ತಮ್ಮ ಸ್ನೇಹಿತರ ಮದುವೆಗಾಗಿ ಕೊಡಗಿಗೆ ಆಗಮಿಸಿದ್ದರು. ಇದೇ ವೇಳೆ ಕೊಡಗಿನ ಸಂಸ್ಕೃತಿ ಉಡುಗೆ ತೊಟ್ಟು ಸಖತ್ ಟ್ರೇಡಿಷನಲ್ ಆಗಿ ಕಾಣಿಸಿಕೊಂಡಿರುವ ಅವರು, ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ.
ಈ ಬಗ್ಗೆ ಕೊಡವ ಶೈಲಿಯಲ್ಲಿ ಉಡುಗೆ ತೊಟ್ಟು, ತುಂಟನೆಯ ನಗೆಯೊಂದಿಗೆ ಮಾತನಾಡಿರುವ ಅವರು, ತಮ್ಮ ಮೇಲಿರುವ ಪ್ರೀತಿಗೆ ತಾವು ಸದಾ ಋಣಿಯಾಗಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ” ಎಲ್ಲರಿಗೂ ನಮಸ್ಕಾರ, ನಾನಿಲ್ಲಿ ಕೊಡಗಿಗೆ ಫ್ರೆಂಡ್ ಮದುವೆಗೆ ಬಂದಿದ್ದೇನೆ. ಕೊಡವ ಭಾಷೆಯಲ್ಲಿ ನಿಮ್ಮೊಡನೆ ಮಾತನಾಡಲು ಬಹಳ ಸಂತಸವಾಗುತ್ತದೆ. ಹಾಗಾಗಿ ಕೊಡಗಿನಲ್ಲಿ ಮಾತನಾಡುತ್ತಿದ್ದೇನೆ. ಕಾವೇರಮ್ಮ ಮತ್ತು ಇಗ್ಗುತಪ್ಪ ಆಶೀರ್ವಾದದಿಂದ ನಾನು ಮುಂದುವರೆಯುತ್ತಿದ್ದೇನೆ. ಹಾಗೂ ನಿಮ್ಮೆಲ್ಲರ ಆಶೀರ್ವಾದದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಮುಂದೆಯೂ ನೀವೆಲ್ಲರೂ ನನಗೆ ಸಪೋರ್ಟ್ ಮಾಡುತ್ತೀರಾ ಎಂದು ಭಾವಿಸಿದ್ದೇನೆ. ಇನ್ನಷ್ಟು ಹಾರ್ಡ್ ವರ್ಕ್ ಮಾಡುವ ಮೂಲಕ ಮುಂದೆ ಮತ್ತಷ್ಟು ಸಾಧಿಸುತ್ತೇನೆ. ನಿವೆಲ್ಲರೂ ಸದಾ ನನ್ನ ಮನಸ್ಸಿನಲ್ಲಿರುತ್ತೀರಾ” ಎಂದು ಹೇಳಿಕೊಂಡಿದ್ದಾರೆ.
ಸದ್ಯ ಬಾಲಿವುಡ್, ಟಾಲಿವುಡ್ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಅವರು, ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಪ್ಯಾನ್ ಇಂಡಿಯಾ ಪುಷ್ಟ ಇದೇ ಡಿಸೆಂಬರ್‌ಗೆ ತೆರೆಕಾಣಲಿದೆ.
https://www.instagram.com/reel/C84UfGoIhTx/?igsh=MWI3NnJjMXptdWFkOA==