Mysore
23
overcast clouds

Social Media

ಗುರುವಾರ, 01 ಜನವರಿ 2026
Light
Dark

‘ಏಕ್‍ ಲವ್‍ ಯಾ’ ನಂತರ ಇನ್ನೊಂದು ಪ್ರೇಮಕಥೆಯೊಂದಿಗೆ ಬಂದ ರಾಣ

ರಕ್ಷಿತಾ ಪ್ರೇಮ್‍ ಸಹೋದರ ರಾಣ, ‘ಏಕ್‍ ಲವ್‍ ಯಾ’ ಚಿತ್ರದ ನಾಯಕನಾಗಿ ಆಯ್ಕೆಯಾದಾಗ, ಆತ ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಬೆಳೆಯಬಹುದು ಎಂದು ಎಲ್ಲರಿಗೂ ನಿರೀಕ್ಷೆ ಇತ್ತು. ಆದರೆ, ರಾಣ ಅಭಿನಯದ ಮೊದಲ ಚಿತ್ರವೇ ಬಾಕ್ಸ್ ಆಫೀಸ್‍ನಲ್ಲಿ ಸೋಲು ಕಂಡಿತು. ಇದಾದ ಮೇಲೆ ರಾಣ ಸುದ್ದಿಯೇ ಇರಲಿಲ್ಲ. ಜೆ.ಪಿ.ನಗರದಲ್ಲಿ ಪಬ್‍ ನಡೆಸುತ್ತಿರುವ ರಾಣ, ಮತ್ತೆ ಬಣ್ಣ ಹಚ್ಚುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಇರುವಾಗಲೇ ರಾಣ ಮತ್ತೆ ಬಂದಿದ್ದಾರೆ.

ತರುಣ್‍ ಸುಧೀರ್‍, ಅಟ್ಲಾಂಟ ನಾಗೇಂದ್ರ ಜೊತೆಗೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿರುವ ಸುದ್ದಿ ಗೊತ್ತೇ ಇದೆ. ಕಳೆದ ತಿಂಗಳು ಈ ಚಿತ್ರದ ಘೋಷಣೆಯಾಗಿತ್ತು. ಈಗ ಆ ಚಿತ್ರಕ್ಕೆ ರಾಣ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ರಾಣನನ್ನು ಬರಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಾಣ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಬಹಿರಂಗಗೊಳಿಸಿಲ್ಲ. ರಕ್ತ ಅಂಟಿರುವ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಣ ಫೋಟೋ ನೋಡಬಹುದೇ ಹೊರತು, ಅವರ ಹೆಸರು ಮತ್ತು ವಿಳಾಸ ಗೋಚರಿಸುವುದಿಲ್ಲ. ಕೆಲವು ದಶಕಗಳ ಹಿಂದಿನ ಲೈಸನ್ಸ್ ಆಗಿರುವುದರಿಂದ, ಕೆಲವು ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂದು ಅಂದಾಜಿಸಬಹುದು.

ಈ ಹಿಂದೆ ‘ಕಾಟೇರ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ರಂಗಸ್ವಾಮಿ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆಯುವ ಕಥೆಯಾಗಲಿದೆಯಂತೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್‍ ನೀಡಲಾಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ಈ ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್‍ ಸಂಕಲನವಿದೆ.

 

Tags:
error: Content is protected !!