Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

‘ಲಿಯೋ’ ದಾಖಲೆಯನ್ನು ಮುರಿಯುತ್ತಾ ರಜನಿಕಾಂತ್ ‘ಕೂಲಿ’?

rajanikath

ರಜನಿಕಾಂತ್‍ ಅಭಿನಯದ ‘ಕೂಲಿ’ ಹೊಸ ದಾಖಲೆ ಬರೆಯುವುದಕ್ಕೆ ಮುಂದಾಗಿದೆ. ಚಿತ್ರವು ಆಗಸ್ಟ್.14ರಂದು ಬಿಡುಗಡೆಯಾಗುತ್ತಿದ್ದು, ಜಗತ್ತಿನಾದ್ಯಂತ ಮೊದಲ ದಿನದ ಅಡ್ವಾನ್ಸ್ ಬುಕ್ಕಿಂಗ್‍ನಿಂದ 50 ಕೋಟಿ ರೂ. ಗಳಿಕೆಯಾಗಿದೆ. ಈ ಮೊತ್ತ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಮೊದಲ ದಿನವೇ ಚಿತ್ರದ ಗಳಿಕೆ 100 ಕೋಟಿ ರೂ. ಮೀರಬಹುದು ಎಂದು ಅಂದಾಜಿಸಲಾಗಿದೆ.

ತಮಿಳು ಚಿತ್ರಗಳು ನೂರು ಕೋಟಿ ಕ್ಲಬ್‍ಗೆ ಸೇರುತ್ತಿರುವುದು ಹೊಸ ವಿಷಯವೇನಲ್ಲ. ಅಂಥದ್ದೊಂದು ಸಾಹಸ ಮೊದಲಿಗೆ ಮಾಡಿದ್ದು ರಜನಿಕಾಂತ್‍ ಅಭಿನಯದ ‘ಶಿವಾಜಿ – ದಿ ಬಾಸ್‍’. ಅಲ್ಲಿಂದ ಇಲ್ಲಿಯವರೆಗೂ ಹಲವು ತಮಿಳು ಚಿತ್ರಗಳು ನೂರು ಕೋಟಿ ರೂ. ಕ್ಲಬ್‍ ಸೇರಿವೆ.

100 ಕೋಟಿ ರೂ. ಕ್ಲಬ್‍ನಲ್ಲಿ ಕೆಲವು ತಮಿಳು ಚಿತ್ರಗಳಿದ್ದರೂ, ಮೊದಲ ದಿವಸವೇ ಅಂಥದ್ದೊಂದು ದಾಖಲೆ ಮಾಡಿದ್ದು ವಿಜಯ್‍ ಅಭಿನಯದ ‘ಲಿಯೋ’. ಈ ಚಿತ್ರವು ಮೊದಲ ದಿನವೇ 100 ಕೋಟಿ ರೂ. ಕ್ಲಬ್‍ ಸೇರಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದವರು ಲೋಕೇಶ್‍ ಕನಕರಾಜ್‍. ಈಗ ಅವರದ್ದೇ ನಿರ್ದೇಶನದ ‘ಕೂಲಿ’ ಸಹ ಮೊದಲ ದಿನವೇ 100 ಕೋಟಿ ಕ್ಲಬ್‍ ಸೇರುವ ಸೂಚನೆ ನೀಡಿದೆ. ಹಾಗೊಂದು ಪಕ್ಷ ಸೇರಿದರೆ, ಲೋಕೇಶ್ ಕನಕರಾಜ್‍ ತಾವೇ ಮಾಡಿದ ದಾಖಲೆಯನ್ನು ತಾವೇ ಮುರಿದಂತಾಗುತ್ತದೆ.

ಇದುವರೆಗೂ ಸುಮಾರು 6.8 ಲಕ್ಷ ಟಿಕೆಟ್‍ಗಳು ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಆ ಸಂಖ್ಯೆ ಮುಂದಿನ ದಿನಗಳಲ್ಲಿ 10 ಲಕ್ಷ ಆಗುವ ನಿರೀಕ್ಷೆ ಇದೆ. ಚಿತ್ರಕ್ಕೆ ಇಷ್ಟೊಂದು ಹೈಪ್‍ ಆಗುವುದಕ್ಕೆ ಪ್ರಮುಖ ಕಾರಣ ಚಿತ್ರದ ತಾರಾಗಣ ಮತ್ತು ಅನಿರುದ್ಧ್ ರವಿಚಂದರ್‍ ಸಂಗೀತ ನಿರ್ದೇಶನದ ಹಾಡುಗಳು.

‘ಕೂಲಿ’ ಚಿತ್ರದಲ್ಲಿ ರಜನಿಕಾಂತ್‍, ಉಪೇಂದ್ರ, ನಾಗಾರ್ಜುನ, ಆಮೀರ್‍ ಖಾನ್‍, ಶ್ರುತಿ ಹಾಸನ್‍, ಶೌಭಿನ್‍ ಶಾಹಿರ್‍ ಮುಂತಾದವರು ನಟಿಸಿದ್ದು, ಲೋಕೇಶ್‍ ಕನಕರಾಜ್‍ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು, ಸನ್‍ ಪಿಕ್ಚರ್ಸ್‌ ಕಲಾನಿಧಿ ಮಾರನ್‍ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Tags:
error: Content is protected !!