Mysore
23
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ವೆಟ್ಟಾಯನ್ ನಷ್ಟವನ್ನು ತುಂಬಿ ಕೊಡುತ್ತಾರಾ ರಜನಿಕಾಂತ್?

ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ವೆಟ್ಟೈಯಾನ್ ಕಳೆದ ವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಇದ್ದ ಕ್ರೇಜ್‍ ಕಡಿಮೆ ಆಗುವುದರ ಜೊತೆಗೆ ಕಲೆಕ್ಷನ್‍ ಸಹ ಕಡಿಮೆಯಾಗಿದೆ. ಚಿತ್ರ ನಿರೀಕ್ಷಿತ ಹಣವನ್ನು ಗಳಿಸಲಿಲ್ಲ ಎಂದು ನಿರ್ಮಾಪಕರು, ರಜನಿಕಾಂತ್‍ ಅವರಿಗೆ ನಷ್ಟ ತುಂಬಿ ಕೊಡುವುದಕ್ಕೆ ಮನವಿ ಮಾಡಿಕೊಂಡಿದ್ದಾರಂತೆ. ಆದಷ್ಟು ಬೇಗ ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ, ‘ವೆಟ್ಟಾಯನ್‍ ಚಿತ್ರದ ಮೊದಲ ವಾರದ ಗಳಿಕೆ 260 ಕೋಟಿ ರೂ.ಗಳು ಎಂಬ ಸುದ್ದಿ ಇದ್ದರೂ, ಚಿತ್ರ ಒಟ್ಟಾರೆ ಗಳಿಸಿದ್ದು ಕೇವಲ 207 ಕೋಟಿ ರೂ.ಗಳಂತೆ. ಇದರಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗಿದೆಯಂತೆ. ಹಾಗಾಗಿ, ಆ ನಷ್ಟವನ್ನು ಭರಿಸಿಕೊಡುವುದಕ್ಕೆ ಇನ್ನೊಂದು ಚಿತ್ರ ಮಾಡಿಕೊಡಬೇಕು ಮತ್ತು ಅದಕ್ಕೆ ಕಡಿಮೆ ಸಂಭಾವನೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರಂತೆ.

ವೆಟ್ಟಾಯನ್‍ಗೂ ಮೊದಲು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ರಜನಿಕಾಂತ್‍ ಅಭಿನಯದಲ್ಲಿ ಮೂರು ಚಿತ್ರಗಳನ್ನು ನಿರಮಿಸಿತ್ತು. ‘2.0’, ‘ದರ್ಬಾರ್‍ಮತ್ತು ‘ಲಾಲ್‍ ಸಲಾಮ್‍’ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಆದರೆ, ಮೂರೂ ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಸೋಲುವುದರ ಜೊತೆಗೆ, ಜನರ ನಿರೀಕ್ಷೆಗಳಿಗೆ ನಿಲುಕಲಿಲ್ಲ. ‘ವೆಟ್ಟಾಯನ್‍’ ಚಿತ್ರವಾದರೂ ಗೆಲ್ಲಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಹಾಗಾಗಿ, ಕಡಿಮೆ ಸಂಭಾವನೆಯಲ್ಲಿ ಇನ್ನೊಂದು ಚಿತ್ರ ಮಾಡಿಕೊಡುವುದಕ್ಕೆ ರಜನಿಕಾಂತ್‍ ಅವರಿಗೆ ಲೈಕಾ ಮನವಿ ಮಾಡಿಕೊಂಡಿದೆಯಂತೆ. ಈ ಹಿಂದೆ ಸೋತ ನಿರ್ಮಾಪಕರಿಗೆ ರಜನಿಕಾಂತ್ ಹಲವು ಬಾರಿ ಸಹಾಯ ಮಾಡಿದ್ದಿದೆ. ಈ ಬಾರಿ ರಜನಿಕಾಂತ್‍ ಏನು ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ.

‘ವೆಟ್ಟಾಯಾನ್’ ಚಿತ್ರದಲ್ಲಿ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ಜೊತೆಯಲ್ಲಿ ರಾಣಾ ದಗ್ಗುಬಾಟಿ, ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ವಿಜಯನ್, ಜಿಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಪ್ರಮುಖ ನಟರು ನಟಿಸಿದ್ದಾರೆ.

 

 

Tags:
error: Content is protected !!