Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಬಿಡುಗಡೆಗೂ ಮುನ್ನವೇ 1000 ಕೋಟಿ ಕ್ಲಬ್‍ ಸೇರಿದ ‘ಪುಷ್ಪ 2’

ಅಲ್ಲು ಅರ್ಜುನ್‍ ಅಭಿನಯದ ಬಹುನಿರೀಕ್ಷೆಯ ಚಿತ್ರವಾದ ‘ಪುಷ್ಪ 2’, ಡಿಸೆಂಬರ್‍ 6ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ 1000 ಕೋಟಿ ರೂ ಕ್ಲಬ್‍ ಸೇರುವ ಮೂಲಕ ಬ್ಲಾಕ್‌ ಬಸ್ಟರ್ ಎಂದೆನಿಸಿಕೊಂಡಿದೆ.

ಹೌದು, ‘ಪುಷ್ಪ 2’ ಚಿತ್ರದ ವಿತರಣೆ, ಡಿಜಿಟಲ್‍, ಸ್ಯಾಟ್‌ಲೈಟ್‍ ಹಕ್ಕುಗಳಿಂದ 1000 ಕೋಟಿ ರೂ ಗಳಿಸಿದೆ ಎಂದು ಹೇಳಲಾಗಿದೆ. ಈ ಪೈಕಿ ವಿತರಣೆ ಹಕ್ಕುಗಳಿಂದ ಚಿತ್ರಕ್ಕೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ. ಗಳಿಕೆ ಎಂದು ಹೇಳಲಾಗುತ್ತಿದೆ. ಅವೆರಡೂ ಸೇರಿ ಚಿತ್ರ 1000 ಕೋಟಿ ರೂ. ಕ್ಲಬ್‍ಗೆ ಸೇರ್ಪಡೆಯಾಗಿದೆ.

ಮೂಲಗಳ ಪ್ರಕಾರ, ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಕರಿಂದ ಚಿತ್ರವನ್ನು ಎರಡೂ ರಾಜ್ಯಗಳ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುವುದಕ್ಕೆ ಸುಮಾರು 220 ಕೋಟಿ ರೂ. ಸಿಕ್ಕಿದೆಯಂತೆ. ಮಿಕ್ಕಂತೆ ಉತ್ತರ ಭಾರತದಿಂದ 200 ಕೋಟಿ ಬಂದರೆ, ಹೊರದೇಶಗಳಿಂದ 140 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಇನ್ನು, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ 100 ಕೋಟಿ ರೂ. ವಿತರಣೆಯಿಂದಲೇ ಬಂದಿದೆ.

ಇನ್ನು, ಚಿತ್ರದ ಡಿಜಿಟಲ್‍ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 275 ಕೋಟಿ ರೂ.ಗಳಿಗೆ ಪಡೆದರೆ, ಸ್ಯಾಟ್‌ಲೈಟ್‍ ಹಕ್ಕುಗಳು 85 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಸಂಗೀತದ ಹಕ್ಕುಗಳು ದಾಖಲೆಯ 65 ಕೋಟಿ ರೂ.ಗಳಿಗೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ, ಬರೀ ಹಕ್ಕುಗಳಿಂದಲೇ 425 ಕೋಟಿ ರೂ.ಗಳನ್ನು ಚಿತ್ರತಂಡ ಗಳಿಸಿದೆ.

‘ಪುಷ್ಪ – ದಿ ರೂಲ್‍’ ಚಿತ್ರವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಪುಷ್ಪ – ದಿ ರೈಸ್‍’ ಚಿತ್ರದ ಮುಂದುವರೆದ ಭಾಗವಾಗಿದೆ. ಪುಷ್ಪರಾಜ್‍ ಎಂಬ ಗ್ಯಾಂಗ್‍ಸ್ಟರ್‍ ಜೀವನದಲ್ಲಿ ನಡೆಯುವ ಕಥೆ ಇರುವ ಈ ಚಿತ್ರದಲ್ಲಿ ಪುಷ್ಪರಾಜ್‍ ಆಗಿ ಅಲ್ಲು ಅರ್ಜುನ್‍ ನಟಿಸಿದ್ದಾರೆ. ಇನ್ನು, ರಶ್ಮಿಕಾ ಮಂದಣ್ಣ ನಟಿಸಿದ್ದು, ಮಿಕ್ಕಂತೆ ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tags: