Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜಾಕಿ ರಿ ರಿಲೀಸ್; ತೆರೆ ಮೇಲೆ ಅಪ್ಪು ನೋಡಿ ಭಾವುಕರಾದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

ಬೆಂಗಳೂರು: ಮಾ.17 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವಿದ್ದು ಅದರ ಬೆನ್ನಲ್ಲೇ ಅಪ್ಪು ನಟನೆಯ ಆಲ್‌ಟೈಮ್‌ ಬ್ಲಾಕ್‌ಬಸ್ಟರ್‌ ಜಾಕಿ ಚಲನಚಿತ್ರವನ್ನು ಕೆಆರ್‌ಜಿ ಸ್ಟುಡಿಯೋ ಸುಮಾರು 120ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಮರು ಬಿಡುಗಡೆ ಮಾಡಿದೆ. ಈ ಸಿನಿಮಾವನ್ನು ಬಹುತೇಕ ಹೊಸ ಚಲನಚಿತ್ರವನ್ನು ರಿಲೀಸ್ ಮಾಡಿದಂತೆ ರಿಲೀಸ್ ಮಾಡಲಾಗಿದ್ದು, ಎಲ್ಲ ಕಡೆ ಉತ್ತಮವಾದ ಪತ್ರತಿಕ್ರಿಯೆ ಸಿಕ್ಕಿರುವುದು ಸಹಜವಾಗಿ ಖುಷಿ ಕೊಟ್ಟಿದೆ.

ಕೆಆರ್‌ಜಿ ಸ್ಟುಡಿಯೋದ ಕಾರ್ತಿಕ್ ಮತ್ತು ಅಪ್ಪುವಿನ ನಡುವೆ ಉತ್ತಮ ಭಾಂದವ್ಯವನ್ನು ಹೊಂದಿದ್ದು, ಈ ಚಿತ್ರವನ್ನು ಅದ್ದೂರಿಯಾಗಿ ವಿತರಣೆ ಮಾಡಿದ್ದಾರೆ. ಸೂರಿ ನಿರ್ದೇಶನದ ಈ ಚಿತ್ರ ಬೆಳಗ್ಗೆ 4.30ರಿಂದಲೇ ಪ್ರದರ್ಶನವನ್ನು ಆರಂಭಿಸಿದೆ. ಇದಕ್ಕೆಂದು ಅಭಿಮಾನಿಗಳು ಚಿತ್ರಮಂದಿರಗಳನ್ನು ಸಿಂಗಾರಗೊಳಿಸಿ, ಅಪ್ಪು ಕಟ್‌ಔಟ್‌ಗೆ ಹಾರ ಹಾಕಿ ಖುಷಿ ಪಟ್ಟಿದ್ದಾರೆ.

ಇನ್ನು ಪತಿ ನಟಿಸಿದ ಚಿತ್ರ ನೋಡುವುದಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು ನಗರದ ಗಾಂಧಿನಗರದಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನಿಯವರು ತೆರೆಯ ಮೇಲೆ ಪುನೀತ್ ರಾಜ್ ಕುಮಾರ್ ಅವರನ್ನು ನೋಡಿ ಭಾವುಕರಾಗಿದ್ದು, ಈ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೇಳೆ ದೊಡ್ಮನೆಯ ವಿನಯ್ ರಾಜ್ ಕುಮಾರ್, ಧೀರೇನ್ ಕುಮಾರ್, ಧನ್ಯರಾಮ್ ಕುಮಾರ್ ಮತ್ತು ವಿತರಕ ಕಾರ್ತಿಕ್ ಗೌಡ ಸೇರಿದಂತೆ ಆಪ್ತರೊಡನೆ ಸಿನಿಮಾ ವೀಕ್ಷಿಸಿದ್ದಾರೆ.

Tags: