Mysore
29
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

‘ದಿ ರಾಜಾ ಸಾಬ್’ ಆಗಿ ಬರ್ತಿದ್ದಾರೆ ಪ್ರಭಾಸ್

ತೆಲುಗು ನಟ ಪ್ರಭಾಸ್‍ ಅವರನ್ನು ಆ್ಯಕ್ಷನ್‍ ಹೀರೋ ಆಗಿ ನೋಡುವುದಕ್ಕೆ ಅವರ ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ. ಅದಕ್ಕೆ ಸರಿಯಾಗಿ ಪ್ರಭಾಸ್‍ ಸಹ ಆ್ಯಕ್ಷನ್ ಹೆಚ್ಚಿರುವ ಪಾತ್ರಗಳಲ್ಲೇ ನಟಿಸುತ್ತಾ ಬಂದಿದ್ದಾರೆ. ಇದೀಗ ಪ್ರಭಾಸ್‍ ಒಂದು ಹಾರರ್‍ ಕಾಮಿಡಿ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಕಲ್ಕಿ 2898 AD’ ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್‍ ಇದೀಗ ಲವರ್‌ ಬಾಯ್‌ ಅವತಾರದಲ್ಲಿ ಎದುರಾಗಿದ್ದಾರೆ. ಅದೇ ‘ದಿ ರಾಜ ಸಾಬ್‍’. ‘ಪ್ರತಿ ರೋಜು ಪಂಡಗ’, ‘ಪ್ರೇಮ ಕಥಾ ಚಿತ್ರಂ’, ‘ಮಹಾನುಭಾವುಡು’ ಸೇರಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಮಾರುತಿ, ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಒಂದು ಸಣ್ಣ ಟೀಸರ್‍ ಸೋಮವಾರ ಸೋಷಿಯಲ್‍ ಮೀಡಿಯಾದಲ್ಲಿ ಬಿಡುಗಡೆಯಾಗಿದೆ.

ಈ ಟೀಸರ್‍ನಲ್ಲಿ ಬರೀ ಪ್ರಭಾಸ್‍ ಅವರ ಪಾತ್ರದ ಪರಿಚಯವನ್ನಷ್ಟೇ ಅಲ್ಲ, ಚಿತ್ರ ಯಾವಾಗ ಬಿಡುಗಡೆ ಎಂಬ ಮಾಹಿತಿಯನ್ನೂ ನೀಡಲಾಗಿದೆ. ಚಿತ್ರವನ್ನು 2025ರ ಏಪ್ರಿಲ್‍ 10ರಂದು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತಯಾರಿ ನಡೆಸುತ್ತಿದೆ. ಪ್ರಭಾಸ್‍ ಅವರ ಹಿಂದಿನ ಚಿತ್ರಗಳಂತೆ ಈ ಚಿತ್ರ ಸಹ ಒಂದು ಪ್ಯಾನ್‍ ಇಂಡಿಯಾ ಚಿತ್ರವಾಗಿದ್ದು, ತೆಲುಗಿನಲ್ಲಿ ನಿರ್ಮಾಣವಾಗಿ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

‘ದಿ ರಾಜ ಸಾಬ್‍’ ಚಿತ್ರಕ್ಕೆ ಈಗಾಗಲೇ ಶೇ. 40% ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್ 2ರಿಂದ ಮತ್ತೊಂದು ಹಂತದ ಶೂಟಿಂಗ್‌ ಪ್ರಾರಂಭವಾಗಲಿದೆ. ಎಸ್.ಎಸ್. ಥಮನ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ವಿಶ್ವ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದಲ್ಲಿ ಪ್ರಭಾಸ್‍ ಜೊತೆಗೆ ಸಂಜಯ್‍ ದತ್‍, ನಿಧಿ ಅಗರ್ವಾಲ್‍, ಮಾಳವಿಕಾ ಮೋಹನ್‍, ರಿದ್ಧಿ ಕುಮಾರ್‍, ಯೋಗಿ ಬಾಬು ಮುಂತಾದವರು ನಟಿಸುತ್ತಿದ್ದಾರೆ.

Tags:
error: Content is protected !!