Mysore
27
broken clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಪಾಲಿಟಿಕ್ಸ್ ಮೈಂಡ್‌ಗೇಮ್ ಅಲ್ಲ. ಇದಕ್ಕೆ ಹೃದಯವಂತಿಕೆ ಬೇಕು: ಶಿವರಾಜ್‌ಕುಮಾರ್

ರಾಜಕೀಯ ಜೀವನದಲ್ಲಿ ಕೆಸರೆರೆಚಾಟ ಸಾಮಾನ್ಯ. ಪರ-ವಿರೋಧ ಟೀಕೆಗಳಿಗೆ ಯಾವ ರಾಜಕೀಯ ಪಕ್ಷಗಳು ಕೂಡ ಹೊರತಾಗಿಲ್ಲ. ಪಾಲಿಟಿಕ್ಸ್ ಎಂದರೆ ಮೈಂಡ್‌ಗೇಮ್ ಅಲ್ಲ. ಇದಕ್ಕೆ ಹೃದಯವಂತಿಕೆ ಬೇಕು ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿದವರಿಗೆ ಮಾತ್ರವಲ್ಲ ಅವರ ಪರ ಪ್ರಚಾರ ಮಾಡುವವರಿಗೂ ಟೀಕೆಗಳು ಎದುರಾಗುತ್ತವೆ. ಶಿವಣ್ಣ ಚುನಾವಣೆ ಪ್ರಚಾರ ಮಾಡುತ್ತಿರುವುದನ್ನು ಕೆಲವರು ಟೀಕಿಸಿದ್ದಾರೆ. ಈ ವಿಚಾರವಾಗಿ ಶಿವಣ್ಣನಿಗೆ ಪ್ರಶ್ನೆ ಎದುರಾದಾಗ ನನಗಗೆ ವಯಸ್ಸು 62 ಆಗಿದೆ. ಮತ ಹಾಕೋಕೆ ಪ್ರಾರಂಭಿಸಿ 42 ವರ್ಷಗಳು ಕಳೆದಿದೆ. ಈಗಲು ರಾಜಕೀಯ ಅರ್ಥ ಆಗಿಲ್ಲ ಅಂದರೆ ಹೇಗೆ? ಎಂದು ಮರುಪ್ರಶ್ನಿಸಿದ್ದಾರೆ.

ಆ ಮೂಲಕ ಯಾರೇ ಟೀಕೆ ಮಾಡಿದರು ನಾನು ಅಂಜುವುದಿಲ್ಲ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಮಾತಿನ ಭರದಲ್ಲಿ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ದೊಡ್ಮನೆ ಹಿರಿ ಸೊಸೆ ಗೀತಾ ಶಿವರಾಜ್‌ ಕುಮಾರ್‌ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದರು. ಶಿವಮೊಗ್ಗ ಕ್ಷೇತ್ರಕ್ಕೆ ಡಮ್ಮಿ ಕ್ಯಾಂಡಿಡೇಟ್‌ನ್ನು ಕಾಂಗ್ರೆಸ್‌ ತಂದು ನಿಲ್ಲಿಸಿದೆ ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

Tags:
error: Content is protected !!