ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಅವರು ಅಕ್ಟೋಬರ್.20ರಂದು ಇಹಲೋಕ ತ್ಯಜಿಸಿದ್ದರು.
ಸುದೀಪ್ ತಾಯಿ ನಿಧನಕ್ಕೆ ಕನ್ನಡ ಚಿತ್ರರಂಗದ ನಟ ನಟಿಯರು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸುದೀಪ್ ತಾಯಿ ಅಗಲಿಕೆಗೆ ಸಂತಾಸ ಸೂಚಿಸಿದ್ದು, ಕಿಚ್ಚನಿಗೆ ಪತ್ರ ರವಾನೆ ಮಾಡಿದ್ದರು.
ಈ ಪತ್ರಕ್ಕೆ ನಟ ಸುದೀಪ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಿಎಂ ನರೇಂದ್ರ ಮೋದಿಯವರ ಪತ್ರ ನನ್ನ ಹೃದಯ ತಟ್ಟಿದೆ ಎಂದಿದ್ದಾರೆ.