Mysore
26
haze

Social Media

ಮಂಗಳವಾರ, 31 ಮಾರ್ಚ್ 2026
Light
Dark

ಆಸ್ಕರ್‌ ವಿಜೇತ ಎ.ಆರ್‌.ರೆಹಮಾನ್‌ ಆಸ್ಪತ್ರೆಗೆ ದಾಖಲು

ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಕರ್‌ ಪ್ರಶಸ್ತಿ ವಿಜೇತ ಎ.ಆರ್‌.ರೆಹಮಾನ್‌ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಿಗ್ಗೆ 7:30ರ ಸಮಯದಲ್ಲಿ ಎ.ಆರ್‌.ರೆಹಮಾನ್‌ (58) ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಸಿಜಿ, ಎಕೋಕಾರ್ಡಿಯೋಗ್ರಾಮ್‌ ಸೇರಿದಂತೆ ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದ್ದು, ಅಂಜಿಯೋಗ್ರಾಮ್‌ ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಚೆನ್ನೈನಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಎಡ್‌ ಶೀರನ್‌ ಅವರೊಂದಿಗೆ ಪ್ರದರ್ಶನ ನೀಡಿದ್ದರು.

ಕಳೆದ ವರ್ಷ ತಮ್ಮ ಮತ್ತು ಸೈರಾ ಬಾನು ಅವರ 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಇಬ್ಬರೂ ಡಿವೋರ್ಸ್‌ ಪಡೆದಿದ್ದರು.

Tags:
error: Content is protected !!