Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

Oscar Award2025: ಆಸ್ಕರ್‌ ಅಂಗಳಕ್ಕೆ ಧುಮುಕಿದ ʼಲಾಪತಾ ಲೇಡಿಸ್‌ʼ

ಭಾರತದಿಂದ ಅಧಿಕೃತವಾಗಿ ಆಯ್ಕೆ

ನವದೆಹಲಿ: ಆಸ್ಕರ್‌ ಆವಾರ್ಡ್‌ ಕಾರ್ಯಕ್ರಮದ ಬಗ್ಗೆ ಬಿಗ್‌ ಅಪ್‌ಡೇಟ್‌ವೊಂದು ಸಿಕ್ಕಿದೆ. ಕಿರಣ್‌ ರಾವ್‌ ಅವರ ಚೊಚ್ಚಲ ನಿರ್ದೇಶನದ ಬಾಲಿವುಡ್‌ ಸಿನಿಮಾ ಲಾಪತಾ ಲೇಡಿಸ್‌ ಚಿತ್ರ 2025ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ.

ಈ ಚಲನಚಿತ್ರವನ್ನು ನಟ ಅಮಿರ್‌ ಖಾನ್‌ ನಿರ್ಮಾಣ ಮಾಡಿದ್ದಾರೆ. ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಂಡ ನಂತರ ಎಲ್ಲರಿಂದ ಮೆಚ್ಚುಗೆ ಪಡೆದ ಈ ಸಿನಿಮಾ, ಒಟಿಟಿಯಲ್ಲಿಯೂ ಸಹ ಜನರಿಂದ ಮನ್ನಣೆ ಗಳಿಸಿತ್ತು.

ಲಾಪತಾ ಲೇಡಿಸ್‌ ಚಿತ್ರವು ಸಿನಿಮಾ ಮಹಿಳೆಯರ ಸಬಲೀಕರಣದ ಕುರಿತು ಇರುವ ಕಥೆಯಾಗಿದೆ. ಇದನ್ನು ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ನಾಮ ನಿರ್ದೇಶನ ಮಾಡಿದ್ದು, ಅಧಿಕೃತವಾಗಿ ಚೈನ್ನೈನಲ್ಲಿ ʻಭಾರತ ಫಿಲ್ಮ್‌ ಫೆಡರೇಶನ್‌ʼ ಸದಸ್ಯರು ಘೋಷಿಸಿದ್ದಾರೆ.

ಈ ಚಿತ್ರದಲ್ಲಿ ನಿಶಾಂತಿ ಗೋಯಾಲ್‌, ಪ್ರತಿಭಾ ರಾಂತಾ, ಸ್ಪರ್ಶ್‌ ಶ್ರೀವಾಸ್ತವ, ಚಾಯಾ ಕದಮ್‌ ಹಾಗೂ ರವಿ ಕಿಶನ್‌ ನಟಿಸಿದ್ದಾರೆ.

ನಿರ್ದೇಶಕ ಕಿರಣ್‌ ರಾವ್‌ ಅವರು ದೊಡ್ಡ ಕನಸಾಗಿರುವ ಈ ಚಿತ್ರವೂ ಆಸ್ಕರ್‌ ಪ್ರಶಸ್ತಿಯನ್ನು ಗೆಲ್ಲಬೇಕೆಂಬುದೇ ಅವರ ಆಶಯವಾಗಿತ್ತು. ಈ ಸಿನಿಮಾ ಮೊದಲು ಟೊರೆಂಟೋ ಇಂಟರ್‌ನ್ಯಾಷನಲ್‌ ಫೆಸ್ಟಿವಲ್‌ನಲ್ಲಿ ಪ್ರಸಾರವಾಗಿತ್ತು.

 

Tags: