Mysore
24
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ನೇಹಾ ಹೀರೆಮಠ್‌ ಹತ್ಯೆ: ನಟ ದರ್ಶನ್‌ ಪ್ರತಿಕ್ರಿಯೆ

ಮೈಸೂರು: ಪ್ರೀತಿ ನಿರಾಕರಸಿದ್ದಕ್ಕಾಗಿ ಯುವತಿಯೊಬ್ಬಳನ್ನು ಕೊಂದು ಅಟ್ಟಹಾಸ ಮೆರೆದಿದ್ದ ಫಯಾಜ್‌ ವಿರುದ್ಧ ಕಾನೂನಾತ್ಮ ಹೋರಾಟ ಮಾಡುವಂತೆ ಸಮಾಜಿಕ ಜಾಲತಾಣದಲ್ಲಿ ಕೂಗು ಕೇಳಿಬುರುತ್ತಿದೆ. ಈ ಕೂಗಿದೆ ಸ್ಯಾಂಡಲ್‌ವುಡ್‌ ಕೂಡ ಧನಿ ಗೂಡಿಸಿದೆ.

ಹುಬ್ಬಳಿಯ ನೇಹಾ ಹೀರೆಮಠ್‌ ಅವರನ್ನು ಅದೇ ಜಿಲ್ಲೆಯ ಫಯಾಜ್‌ ಎಂಬುವವನು ಪ್ರೀತಿಸುವಂತೆ ಕೇಳಿದ್ದು, ಇದನ್ನು ನಿರಾಕರಿಸಿದ ಕಾರಣ ಆಕೆಯನ್ನು ಹತ್ಯೆಗೈದಿದ್ದನು. ಈ ಪ್ರಕರಣ ಸಂಬಂಧ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿತ್ತು. ಇದಕ್ಕೆ ಸದ್ಯ ಕನ್ನಡ ಚಿತ್ರರಂಗವೂ ಕೈ ಜೋಡಿಸಿದೆ.

ಡಿ ಬಾಸ್‌ ದರ್ಶನ್‌, ರಚಿತಾ ರಾಮ್‌, ರಿಷಭ್‌ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಹಲವು ನಟ ನಟಿಯರು ನೇಹಾ ಗೆ ನ್ಯಾಯ ಸಿಗಬೇಕು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ದರ್ಶನ್‌ ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. #JusticeForNehaHiremath ಎಂದು ಬರೆದುಕೊಂಡಿದ್ದಾರೆ.

ಇವರಿಗೆ ಪ್ರಣಿತಾ ಸುಭಾಶ್‌, ಡಾ. ಶಿವರಾಜ್‌ ಕುಮಾರ್‌, ಕಾರುಣ್ಯ ರಾಮ್‌, ಕೂಡಾ ಧನಿ ಎತ್ತುವ ಮೂಲಕ ದರ್ಶನ್‌ಗೆ ಸಾಥ್‌ ನೀಡಿದ್ದಾರೆ.

Tags:
error: Content is protected !!