Mysore
18
overcast clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

‘Q’ ಚಿತ್ರಕ್ಕೆ ಭಾಗ್ಯಶ್ರೀ ಮಗಳನ್ನು ಕನ್ನಡಕ್ಕೆ ಕರೆತಂದ ನಾಗಶೇಖರ್

ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಮೊದಲು ದಸರಾಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದರು ನಾಗಶೇಖರ್‍. ಆದರೆ, ಚಿತ್ರದ ಚಿತ್ರೀಕರಣ ತಡವಾಗಿದ್ದರಿಂದ, ಚಿತ್ರವು ನವೆಂಬರ್‍ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಈ ಮಧ್ಯೆ, ನಾಗಶೇಖರ್ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಹಾಗೆ ನೋಡಿದರೆ, ಇದು ಹೊಸ ಚಿತ್ರವೇನಲ್ಲ, ಎರಡು ವರ್ಷಗಳ ಹಿಂದೆಯೇ ಅವರು ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‍ ಸುಧೀಂದ್ರ ಅಭಿನಯದಲ್ಲಿ ‘Q’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಅವರು ಘೋಷಿಸಿದ್ದರು. ಕಾರಣಾಂತರಗಳಿಂದ ಚಿತ್ರ ಪ್ರಾರಂಭವಾಗಿಲ್ಲ. ಈಗ ಆ ಚಿತ್ರವನ್ನು ಅವರು ಪುನಃ ಕೈಗೆತ್ತಿಕೊಂಡಿದ್ದು, ಮುಂದಿನ ತಿಂಗಳು ಚಿತ್ರದ ಮುಹೂರ್ತ ನಡೆಯಲಿದೆ. ಈ ಚಿತ್ರವು ಪ್ಯಾನ್ ‍ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ.

‘Q’ ಚಿತ್ರವನ್ನು ತಮ್ಮದೇ ಆದ ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವ ನಾಗಶೇಖರ್ ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಸಹ ತಾವೇ ಹೊತ್ತಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿರುವ ಈ ಚಿತ್ರವನ್ನು ಭಾವನಾ ರವಿ ಅವರು ಅರ್ಪಿಸುತ್ತಿದ್ದಾರೆ.

ವಿಶೇಷವೆಂದರೆ, ಈ ಚಿತ್ರದ ಮೂಲಕ ನಾಗಶೇಖರ್, ‘ಮೈನೆ ಪ್ಯಾರ್ ಕಿಯಾ’ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ ಅವರನ್ನು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಅವಂತಿಕಾ ಇದಕ್ಕೂ ಮುನ್ನ ಹಿಂದಿಯಲ್ಲಿ ‘ಮಿಥ್ಯ’ ಎಂಬ ವೆಬ್‍ಸರಣಿಯಲ್ಲಿ ನಟಿಸಿದ್ದರು. ಈಗ ‘Q’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಅವಂತಿಕಾ ತಾಯಿ ಭಾಗ್ಯಶ್ರೀ ಸಹ ಕನ್ನಡಕ್ಕೆ ಹೊಸಬರೇನಲ್ಲ. ಹಲವು ವರ್ಷಗಳ ಹಿಂದೆ ಅವರು ಶಿವರಾಜಕುಮಾರ್‍ ಅಭಿನಯದ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ನಂತರ ನಿಖಿಲ್‍ ಕುಮಾರ್‍ ಅಭಿನಯುದ ‘ಸೀತಾರಾಮ ಕಲ್ಯಾಣ’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಅವರ ಮಗಳು ‘Q’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

‘Q’ ಚಿತ್ರಕ್ಕೆ ಚಕ್ರವರ್ತಿ ಚಂದ್ರಚೂಡ್‍ ಸಂಭಾಷಣೆ ರಚಿಸಿದ್ದಾರೆ.

Tags:
error: Content is protected !!