Mysore
18
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ʼಮಫ್ತಿ 2ʼ ಬರೋದು ನಿಜ ಎಂದ ಶಿವರಾಜಕುಮಾರ್ …

ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಚಿತ್ರ ಕಳೆದ ನವೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ಈ ಚಿತ್ರವು, ಬಿಡುಗಡೆಯಾದ ಆರು ದಿನಗಳಲ್ಲಿ ೧೨ ಕೋಟಿ ರೂ.ಗಳಿಗೆ ಹೆಚ್ಚು ಗಲಿಕೆ ಕಂಡಿದೆ. ಈ ನಡುವೆ ಚಿತ್ರದ ಸೀಕ್ವೆಲ್ ಬರಲಿದೆ ಎಂದು ಶಿವರಾಜಕುಮಾರ್ ಘೋಷಣೆ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಸಂತೋಷ ಕೂಟದಲ್ಲಿ ಮಾತನಾಡಿರುವ ಶಿವರಾಜಕುಮಾರ್, ʼʼಮಫ್ತಿʼ ಚಿತ್ರದ ನನ್ನ ಭೈರತಿ ರಣಗಲ್ ಪಾತ್ರವನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು ಎಂದು ಮಾತು ಶುರು ಮಾಡಿದ ಶಿವಣ್ಣ, ʼʼಭೈರತಿ ರಣಗಲ್ʼ ಚಿತ್ರದ ರಣಗಲ್ ಪಾತ್ರವನ್ನು ಹೃದಯಕ್ಕೆ ತೆಗೆದುಕೊಂಡಿದ್ದಾರೆ. ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಎರಡನೇ ಚಿತ್ರವಿದು. ಒಳ್ಳೆಯ ಚಿತ್ರಗಳನ್ನು ನೀಡಿದಾಗ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂಬುದಕ್ಕೆ ಈ ಚಿತ್ರ ಉದಾಹರಣೆ. ಈ ಯಶಸ್ಸು ನನ್ನೊಬ್ಬನದಲ್ಲ. ಇಡೀ ತಂಡದು. ಮುಂದೆ ʼಮಫ್ತಿ ೨ʼ ಮಾಡಬೇಕೆಂಬುದು ಅಭಿಮಾನಿಗಳ ಆಸೆ. ಖಂಡಿತಾ ಮಾಡುತ್ತೇನೆ. ಆದರೆ, ಶೀರ್ಷಿಕೆ ʼಮಫ್ತಿ ೨ʼ ಎಂದಿರುವುದಿಲ್ಲ. ಸದ್ಯದಲ್ಲೇ ಆ ಚಿತ್ರದ ಶೀರ್ಷಿಕೆಯನ್ನು ತಿಳಿಸುತ್ತೇನೆʼ ಎಂದರು.

ಇನ್ನು, ಚಿತ್ರದ ಕಲೆಕ್ಷನ್ ಎಷ್ಟಾಗಿದೆ ಎಂಬ ವಿಷಯವನ್ನು ಚಿತ್ರತಂಡದವರಾಗಲೀ, ಚಿತ್ರವನ್ನು ವಿತರಣೆ ಮಾಡಿರುವ ಜಗದೀಶ್ ಫಿಲಂಸ್ನವರಾಗಲೀ ಘೋಷಣೆ ಮಾಡಿಲ್ಲ. ಆದರೆ, ವಿತರಕರ ಮುಖದಲ್ಲಿ ಸಂತೋಷ ಕಂಡೆ ಸಿನಿಮಾ ಗೆದ್ದ ಹಾಗೆ ಎಂದಿರುವ ವಿತರಕ ಜಗದೀಶ್, ʼಕನ್ನಡ ಚಿತ್ರಗಳು ಓಡುತ್ತಿಲ್ಲ ಎಂಬುದು ಸುಳ್ಳು. ಉತ್ತಮ ಚಿತ್ರಗಳನ್ನು ಬಂದರೆ ಜನ ಖಂಡಿತವಾಗಿ ಜನ ನೋಡುತ್ತಾರೆ. ಅದಕ್ಕೆ ಈ ಚಿತ್ರವೇ ಉದಾಹರಣೆ. ಎರಡನೇ ವಾರದಲ್ಲಿ ಶೋಗಳ ಸಂಖ್ಯೆ ಹೆಚ್ಚಳವಾಗಲಿದೆ. ವಿತರಕರ ಮುಖದಲ್ಲಿ ಸಂತೋಷ ಕಂಡರೆ ಆ ಸಿನಿಮಾ ಗೆದ್ದ ಹಾಗೆʼ  ಎಂದರು.

Tags:
error: Content is protected !!