Mysore
23
broken clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಮೇಘನಾ ಗಾಂವ್ಕರ್‍ ಇದೀಗ ಡಾ.ಮೇಘನಾ ಗಾಂವ್ಕರ್‍

ಕನ್ನಡದ ಹಲವು ನಟ-ನಟಿಯರಿಗೆ ಗೌರವ ಡಾಕ್ಟರೇಟ್‍ ಸಿಕ್ಕಿದೆ. ಈ ಸಾಲಿಗೆ ಇದೀಗ ನಟಿ ಮೇಘನಾ ಗಾಂವ್ಕರ್‍ ಸಹ ಸೇರಿದ್ದಾರೆ. ಮೇಘನಾ ಗಾಂವ್ಕರ್‍ ಇದೀಗ ಡಾ.ಮೇಘನಾ ಗಾಂವ್ಕರ್‍ ಆಗಿದ್ದಾರೆ. ಹಾಗಂತ ಅವರಿಗೆ ಯಾವುದೇ ವಿಶ್ವವಿದ್ಯಾಲಯವೂ ಗೌರವ ಡಾಕ್ಟರೇಟ್‍ ನೀಡಿಲ್ಲ. ಮೇಘನಾ, ಥೀಸಿಸ್‍ ಸಲ್ಲಿಸಿ ಡಾಕ್ಟರೇಟ್‍ ಪಡೆದಿದ್ದಾರೆ.

ಈ ಕುರಿತು ತಮ್ಮ ಸೋಷಿಯಲ್‍ ಮೀಡಿಯಾದ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಮೇಘನಾ, ತಮ್ಮ ಆರು ವರ್ಷಗಳ ಸತತ ಪರಿಶ್ರಮ ಫಲ ನೀಡಿದೆ ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ‘ಸಿನಿಮಾ ಮತ್ತು ಸಾಹಿತ್ಯ’ ಎಂಬ ವಿಷಯದ ಬಗ್ಗೆ ಮೇಘನಾ ಪಿಎಚ್‍ಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನಿಮ್ಮೆಲ್ಲರ ಜೊತೆಗೆ ಒಂದು ಸಿಹಿ ಸುದ್ದಿಯನ್ನು ಹಂಚಿಕೊಳ್ಳಬೇಕು. ನಾನು ಮದುವೆಯಾಗುತ್ತಿಲ್ಲ. ಕಳೆದ ಆರು ವರ್ಷಗಳಿಂದ ಪಿಎಚ್‍ಡಿಗೆ ತಯಾರಿ ನಡೆಸಿದ್ದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನನ್ನ ಥೀಸಿಸ್‍ ಕಳಿಸಿದೆ. ಕಳೆದ ವಾರ ನನ್ನ ವೈವಾ ಸಹ ಮುಗಿಯಿತು. ಈಗ ನನಗೆ ಡಾಕ್ಟರೇಟ್‍ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. ಇದು ನನಗೆ ಬಹಳ ವಿಶೇಷವಾಗಿದ್ದು. ಏಕೆಂದರೆ, ಈ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ನಾನು ಮೊದಲು ಪಿಎಚ್‍ಡಿ ಮಾಡಬೇಕೆಂದು ತೀರ್ಮಾನಿಸಿದಾಗಿನಿಂದ, ಬಹಳಷ್ಟು ಜನ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಎಲ್ಲರಿಗೂ ನನ್ನ ಹೃದಯಪೂರ್ವಕವಾದ ಧನ್ಯವಾದಗಳು’ ಎಂದು ಹೇಳಿಕೊಂಡಿದ್ದಾರೆ.

‘ಸಿನಿಮಾ ಮತ್ತು ಸಾಹಿತ್ಯ’ ವಿಷಯ ಆಯ್ಕೆ ಮಾಡಿಕೊಂಡಿರುವ ಕುರಿತು ಮಾತನಾಡಿರುವ ಮೇಘನಾ, ‘ಇದು ನನ್ನ ಹೃದಯಕ್ಕೆ ಹತ್ತಿರವಾದ ವಿಷಯ.’ ಎಂದು ತಿಳಿಸಿದ್ದಾರೆ.

ಇನ್ನು, ಈ ಪಿಎಚ್‍ಡಿ ಪದವಿಯರನ್ನು ತಂದೆಗೆ ಅರ್ಪಿಸಿರುವ ಮೇಘನಾ, ‘ಈ ಪಿಎಚ್‍ಡಿ ಪದವಿಯನ್ನು ನನ್ನ ತಂದೆಗೆ ಅರ್ಪಿಸುತ್ತೇನೆ. ಇದು ಅವರ ಕನಸು. ನಾನು ಪಿಎಚ್‍ಡಿ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಆ ಆಸೆ ಈಗ ಪೂರೈಸಿದೆ’ ಎಂದಿದ್ದಾರೆ.

ವೀಡಿಯೋ ಜೊತೆಗೆ ಪಿಎಚ್‌ಡಿ ಪ್ರಮಾಣ ಪತ್ರದೊಂದಿಗಿನ ಫೋಟೋವನ್ನು ಮೇಘನಾ ಗಾಂವ್ಕರ್ ಹಂಚಿಕೊಂಡಿದ್ದಾರೆ.

Tags:
error: Content is protected !!