Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ …

manohar ravichandran

ರವಿಚಂದ್ರನ್‍ ಅವರ ಮಗ ಮನೋರಂಜನ್ ರವಿಚಂದ್ರನ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳೇ ಆಗಿವೆ. 2022ರಲ್ಲಿ ಬಿಡುಗಡೆಯಾದ ‘ಪ್ರಾರಂಭ’ ಚಿತ್ರದ ನಂತರ ಮನೋರಂಜನ್‍ ಒಂದೆರಡು ಚಿತ್ರಗಳನ್ನು ಒಪ್ಪಿಕೊಂಡರಾದರೂ, ಯಾವ ಚಿತ್ರವೂ ಬಿಡುಗಡೆ ಆಗಿಲ್ಲ.

ಇದೀಗ ಮನೋರಂಜನ್‍ ಅವರ ಐದನೇ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಮನು ಹೊಸ ಸಾಹಸಕ್ಕೆ ಸಹೋದರ ವಿಕ್ರಮ್ ರವಿಚಂದ್ರನ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ರುದ್ರೇಶ್ ನಿರ್ದೇಶನದಲ್ಲಿ ಮನೋರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದು, ಬೃಂದಾ ಆಚಾರ್ಯ ನಾಯಕಿಯಾಗಿ ಜೊತೆಯಾಗಿದ್ದಾರೆ. ನಟಿ ಅನುಷಾ ರೈ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ರುದ್ರೇಶ್‍ ಕಥೆ ರಚಿಸಿದ್ದು, ಒಂದು ವಿಭಿನ್ನ ವಿಷಯವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳುವುದಕ್ಕೆ ಮುಂದಾಗಿದ್ದಾರೆ.

ವೈಎಸ್ ಪ್ರೊಡಕ್ಷನ್ ನಡಿ ಶ್ರೀನಿವಾಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ, ಸೆಲ್ವಂ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್‍ ಅವರ ಸಂಕಲನವಿದೆ. ಚಿತ್ರದ ಮುಹೂರ್ತವಾಗಿದ್ದರೂ, ಚಿತ್ರೀಕರಣ ಪ್ರಾರಂಭವಾಗುವುದು ಮುಂದಿನ ವಾರದಿಂದ. ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ‌. ಆ ಬಳಿಕ ಚಿತ್ರತಂಡ ಬಾದಾಮಿಯಲ್ಲಿ ಚಿತ್ರೀಕರಣ ಮುಂದುವರೆಸಲಿದೆ.

Tags:
error: Content is protected !!