Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಹುಟ್ಟುಹಬ್ಬದ ದಿನವೇ ಧನ್ಶಿಕಾ ಜೊತೆಗೆ ವಿಶಾಲ್‍ ಮದುವೆ

vishal and dhanshika marriage

ಕಾಲಿವುಡ್‍ ನಟ ವಿಶಾಲ್‍ಗೆ 47 ವಯಸ್ಸಾದರೂ ಮದುವೆಯಾಗಿಲ್ಲ. ಮದುವೆ ಯಾವಾಗ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗಲೆಲ್ಲಾ ನಡಿಗರ್ ಸಂಗಂ ಕಟ್ಟಡದ ಉದ್ಘಾಟನೆಯಾದ ನಂತರ ಮದುವೆ ಎಂದು ಹೇಳುತ್ತಿದ್ದರು. ಅದರಂತೆ ಸಂಘದ ಉದ್ಘಾಟನೆ ಆಗಸ್ಟ್ 15ರಂದು ನಡೆಯಲಿದೆ. ಅದಾಗಿ ಕೆಲವೇ ದಿನಗಳಲ್ಲಿ ಅಂದರೆ, ಆ.29ರಂದು ಅವರು ಮದುವೆಯಾಗಲಿದ್ದಾರೆ.

ವಿಶಾಲ್‍ ಮದುವೆಯಾಗುತ್ತಿರುವ ಹುಡುಗಿ ಯಾರು ಗೊತ್ತಾ? ನಟಿ ಸಾಯಿ ಧನ್ಶಿಕಾ. ಕನ್ನಡದ ‘ಕೆಂಪ’ ಮತ್ತು ‘ಉದ್ಘರ್ಷ’ ಚಿತ್ರದಲ್ಲಿ ನಟಿಸಿರುವ ಧನ್ಶಿಕಾ ಮತ್ತು ವಿಶಾಲ್‍ ಸುಮಾರು 15 ವರ್ಷಗಳ ಸ್ನೇಹಿತರಂತೆ. ಈಗ ಇಬ್ಬರೂ ಜೊತೆಯಾಗಿ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಚೆನ್ನೈನಲ್ಲಿ ನಡೆದ ಧನ್ಶಿಕಾ ನಟನೆಯ ಹೊಸ ಚಿತ್ರದ ಸಮಾರಂಭದಲ್ಲಿ ಇಬ್ಬರೂ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಈ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದ ವಿಶಾಲ್‍ ಮಾತನಾಡಿ, ‘ನನಗೆ ಧನ್ಶಿಕಾ ಜೊತೆ ಮದುವೆ ಫಿಕ್ಸ್ ಆಗಿದೆ. ಅವರ ತಂದೆ ಕೂಡ ಇಲ್ಲಿಯೇ ಇದ್ದಾರೆ. ಧನ್ಶಿಕಾ ಅದ್ಭುತ ನಟಿ. ಮದುವೆ ಬಳಿಕವೂ ಆಕೆ ನಟನೆ ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಮದುವೆ ವಿಷಯ ಈಗಲೇ ತಿಳಿಸಬಾರದು ಅಂತ ಅಂದುಕೊಂಡಿದ್ದರಂತೆ ಧನ್ಶಿಕಾ. ‘ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆಯಿಂದ ನ್ಯೂಸ್ ವೈರಲ್ ಆಗುತ್ತಿದೆ. ಇನ್ನು ಮುಚ್ಚಿಟ್ಟು ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಈಗಲೇ ಮದುವೆ ದಿನಾಂಕ ಘೋಷಣೆ ಮಾಡುತ್ತಿದ್ದೇವೆ. ಕಳೆದ 15 ವರ್ಷಗಳಿಂದಲೂ ಇಬ್ಬರ ನಡುವೆ ಒಳ್ಳೆಯ ಸಂಬಂಧ ಇದೆ. ಅವರಿಗೆ ನನ್ನ ಬಗ್ಗೆ ತುಂಬಾ ಗೌರವ ಇದೆ. ನಾನು ಸಮಸ್ಯೆಯಲ್ಲಿದ್ದಾಗ, ಅವರು ನನ್ನ ಮನೆಗೆ ಬಂದು ಬೆಂಬಲವಾಗಿ ನಿಂತಿದ್ದರು. ಯಾವ ಹೀರೋ ಸಹ ನನಗೆ ಬೆಂಬಲವನ್ನು ಸೂಚಿಸಿರಲಿಲ್ಲ. ಅವರ ಈ ನಡವಳಿಕೆಯಿಂದ ಬಹಳ ಖುಷಿಯಾಯಿತು. ನಡಿಗರ್ ಸಂಘದ ಕಟ್ಟಡ ಆಗಸ್ಟ್.15ರಂದು ಉದ್ಘಾಟನೆ ಆಗಲಿದೆ. ಬಳಿಕ ಆಗಸ್ಟ್.29ರಂದು ಇಬ್ಬರು ಹೊಸ ಜೀವನಕ್ಕೆ ಕಾಲಿಡಲಿದ್ದೇವೆ’ ಎಂದು ಹೇಳಿದ್ದಾರೆ.

Tags:
error: Content is protected !!