ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಕಿಚ್ಚ ಸುದೀಪ್‌ಗೆ ತುಮಕೂರು ವಿಶ್ವವಿದ್ಯಾನಿಲಯ ಗೌರ ಡಾಕ್ಟರೇಟ್ ಘೋಷಿಸಿತ್ತು. ಆದರೆ ಇದನ್ನು ನಟ ಸುದೀಪ್ ನಿರಾಕರಿಸಿದ್ದಾರೆ.
ಕಿಚ್ಚ ಸುದೀಪ್ ಅವರ ಒಳ್ಳೆಯ ಕೆಲಸಗಳನ್ನು ಗಮನಿಸಿ ತುಮಕೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ಇದನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಮಾದರಿ ನಡೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತುಮಕೂರು ವಿಶ್ವವಿದ್ಯಾನಿಲಯದ ನಿರ್ಧಾರಕ್ಕೆ ಧನ್ಯವಾದ ಹೇಳಿರುವ ಕಿಚ್ಚ ಸುದೀಪ್ ಅವರು, ಇದನ್ನು ವಿನಮ್ರವಾಗಿ ನಿರಾಕರಿಸಿದ್ದೇನೆ. ಸಮಾಜದಲ್ಲಿ ಸೇವೆ ಮಾಡಿದ ನನಗಿಂತಲೂ ತುಂಬಾ ಜನ ಹಿರಿಯರಿದ್ದಾರೆ. ಅವರಿಗೆ ಈ ಡಾಕ್ಟರೇಟ್ ನೀಡಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಮನೋರಂಜನೆ ಹಾಗೂ ನಟನೆಯಲ್ಲಿ ಸುದೀಪ್ ಸಲ್ಲಿಸಿದ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ ಸುದೀಪ್ ಈ ಗೌರವವನ್ನು ತಿರಸ್ಕರಿಸಿದ್ದು, ಪಿಎ ಮುಖಾಂತರ ಮಾಹಿತಿ ರವಾನಿಸಿದ್ದಾರೆ.