ಬೆಂಗಳೂರು: ಕನ್ನಡದ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಎ. ಹರ್ಷ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕನ್ನಡದಲ್ಲಿ ವೇದ, ಭಜರಂಗಿ, ಭಜರಂಗಿ-2 ಸಿನಿಮಾ ನಿರ್ದೇಶನ ಮಾಡಿರುವ ಹರ್ಷ, ತೆಲುಗು ಪ್ರಾಜೆಕ್ಟ್ ನಂತರ ಬಾಲಿವಡ್ ನಟ ಟೈಗರ್ ಶ್ರಾಫ್ ನಟನೆಯ ಭಾಗಿ-4 ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು 2025ರ ಸೆಪ್ಟೆಂಬರ್.5ಕ್ಕೆ ತೆರೆ ಕಾಣಲಿದೆ.
ಸಜೀದ್ ನಾಡಿಯಾಡ್ವಾಲಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಭಾಗಿ-1 ಚಿತ್ರ ಬಿಡುಗಡೆಯಾಗಿತ್ತು. ಸಬೀರ್ ಖಾನ್ ಇದನ್ನು ನಿರ್ದೇಶಿಸಿದರು.
ನಂತರ ಅಹಮದ್ ಖಾನ್ ನಿರ್ದೇಶನದಲ್ಲಿ ಭಾಗಿ-2 ಹಾಗೂ ಭಾಗಿ-3 ಕ್ರಮವಾಗಿ 2018 ಮತ್ತು 2020ರಲ್ಲಿ ತೆರೆಗೆ ಅಪ್ಪಳಿಸಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದವು. ಈ ಸಿನಿಮಾಗಳಿಗೂ ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆಯಲ್ಲಿ ನಾಡಿಯಾಡ್ವಾಲಾ ಗ್ರ್ಯಾಂಡ್ಸ್ವನ್ ಬ್ಯಾನರ್ ನಿರ್ಮಾಣ ಮಾಡಿತ್ತು.
ನಾಡಿಯಾಡ್ವಾಲಾ ಗ್ರ್ಯಾಂಡ್ಸ್ವನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲೇ ಭಾಗಿ-4 ಚಿತ್ರವನ್ನು ನಿರ್ಮಾಣ ಮಾಡಲಿದ್ದು, ಭರ್ಜರಿ ಕಲೆಕ್ಷನ್ ನಿರೀಕ್ಷೆಯಲ್ಲಿದ್ದಾರೆ.
ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಭಾಗಿ-4 ನಿರ್ದೇಶನದ ಸುಳಿವು ನೀಡಿದ್ದಾರೆ.