Mysore
20
clear sky

Social Media

ಭಾನುವಾರ, 21 ಡಿಸೆಂಬರ್ 2025
Light
Dark

ವಯನಾಡು ಭೂಕುಸಿತ: ನೆರವಿಗೆ ನಿಂತ ಕನ್ನಡದ ಸ್ಟಾರ್‌ ನಟಿ ರಶ್ಮಿಕಾ

ಬೆಂಗಳೂರು: ವರುಣ ಆರ್ಭಟಕ್ಕೆ ತತ್ತರಿಸಿ ಹೋಗಿರುವ ಕೇರಳ ರಾಜ್ಯದ ವಯನಾಡು ತಾಲೂಕಿನ ನಾಲ್ಕು ಗ್ರಾಮಗಳು ಭಾಗಶಃ ಮುಳುಗಡೆಯಾಗಿದೆ. ಇನ್ನು ಈ ಭೀಕರ ಭೂಕಂಪದಲ್ಲಿ 300ಕ್ಕೂ ಅಧಿಕ ಮಂದಿ ಮೃತರಾಗಿದ್ದು, ಇನ್ನು ಅನೇಕರ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ.

ಈ ದುರಂತಕ್ಕೆ ಹಲವಾರು ಚಿತ್ರನಟ, ನಟಿಯರು ನೆರವಾಗಲು ಮುಂದಾಗಿದ್ದಾರೆ. ಇತ್ತ ಕನ್ನಡದ ಸ್ಟಾರ್‌ ನಟಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಅವರು ಕೇರಳದ ಭೂ ಕುಸಿತಕ್ಕೆ ಕಂಬನಿ ಮಿಡಿದಿದ್ದು, ದೇಣಿಗೆ ರೂಪದಲ್ಲಿ ಸಹಾಯಕ್ಕೆ ಬಂದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂ ಹಣವನ್ನು ಸಿಎಂ ಫಂಡ್‌ಗೆ ದೇಣಿಗೆಯಾಗಿ ನೀಡಿದ್ದಾರೆ. ಇದರ ಜೊತೆಗೆ ತಮಿಳಿನ ಖ್ಯಾತ ನಟ ವಿಕ್ರಮ (ಚಿಯಾನ್‌ ವಿಕ್ರಮ್‌) ಅವರು ಸಹಾ 20 ಲಕ್ಷ ರೂ. ಹಣ ನೀಡಿ ನೆರವಿಗೆ ನಿಂತಿದ್ದಾರೆ.

ಇನ್ನು ಮುಮ್ಮುಟ್ಟಿ ಹಾಗೂ ದುಲ್ಕರ್‌ ಸಲ್ಮಾನ್‌ ಸೇರಿ 35 ಲಕ್ಷ, ಫಹಾದ್‌ ಫಾಸಿಲ್‌ ದಂಪತಿ 25 ಲಕ್ಷ, ತಮಿಳಿನ ಖ್ಯಾತ ನಟ ಸೂರ್ಯ ದಂಪತಿ ಹಾಗೂ ಸೂರ್ಯ ತಮ್ಮ ಕಾರ್ತಿಕ್‌ ಸೇರಿದಂತೆ 50 ಲಕ್ಷ ರೂ. ದೇಣೀಗೆಯನ್ನು ಸಿಎಂ ಫಂಡ್‌ಗೆ ನೀಡಿ ನೆರವಿಗೆ ಬಂದಿದ್ದಾರೆ.

Tags:
error: Content is protected !!