ಕೊಚ್ಚಿನ್/ಕೇರಳ: ಕುವೈತ್‌ನಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮಡಿದ ಭಾರತೀಯರ ಮೃತದೇಹವನ್ನು ಹೊತ್ತ IAF ಯುದ್ಧ ವಿಮಾನ ಶುಕ್ರವಾರ (ಜೂನ್.14) ಕೇರಳದ ಕೊಚ್ಚಿನ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಕುವೈತ್‌ನಲ್ಲಿ ಮಡಿದ 31 ಮಂದಿ ಭಾರತೀಯರ ಪಾರ್ಥೀವ ಶರೀರವನ್ನು IAF C30J ಭಾರತೀಯ ಸೇನಾ ವಿಮಾನ ದೇಶಕ್ಕೆ ಹೊತ್ತು ತಂದಿದೆ. ಈ 31ಜನರ ಪೈಕಿ 23 ಜನ ಕೇರಳಿಗರು, 7 ತಮಿಳುಗರು ಹಾಗೂ 1 ಕರ್ನಾಟಕದವರಾಗಿದ್ದಾರೆ. ಇದೇ ಜೂನ್ 12 ರಂದು ಕುವೈತ್‌ನಲ್ಲಿ ನಡೆದ ಭಾರೀ ಅಗ್ನಿ ಅವಘಡದಲ್ಲಿ 40 ಮಂದಿ ಮೃತಪಟ್ಟಿದ್ದು, 50 ಮಂದಿ ಗಾಯಗೊಂಡಿದ್ದರು.