ಬೆಂಗಳೂರು: ಪುನೀತ್ ರಾಜ್‌ಕುಮಾರ್ ಪತ್ನಿ ಹಾಗೂ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಬಗ್ಗೆ ಇಂದು (ಏ.೬) ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ʼಪಾಸಿಟಿವ್ ಮತ್ತು ನೆಗಟಿವ್ ಹೇಗೆ ತೆಗೆದುಕೊಳ್ಳುತ್ತಿರಿʼ ಎಂದು ಮಾಧ್ಯಮದವರು ಕೇಳಿದ್ದಾರೆ. ಇದಕ್ಕೆ ಅವರು ನೇರ ಉತ್ತರ ನೀಡಿದ್ದಾರೆ. ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್. ಈ ಮೂಲಕ ಅವರು ಅವಹೇಳಕಾರಿ ಪೋಸ್ಟ್ ಬಗ್ಗೆ ಪರೋಕ್ಷವಾಗಿ ಉತ್ತರಿಸಿದ್ದಾರೆ.
ಪಿಆರ್‌ಕೆ ಸ್ಟುಡಿಯೋಸ್ ಅಡಿಯಲ್ಲಿ ಸಿದ್ಧವಾಗುತ್ತಿದ್ದ ಸಿನಿಮಾಗಳಿಗೆ ಪುನೀತ್ ಅವರು ಕಥೆ ಕೇಳಿ ಪೈನಲ್ ಮಾಡುತ್ತಿದ್ದರು. ʻಒ2ʼ ಚಿತ್ರದವರೆಗೂ ಅಪ್ಪು ಕಥೆಯನ್ನು ಕೇಳಿದ್ದರು. ಇನ್ಮುಂದೆ ನಾನು ಮತ್ತು ನನ್ನ ಟೀಮ್ ನಿರ್ಧಾರ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಗಜನಪಡೆ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಆರ್‌ಸಿಬಿ ಸೋಲಿಗೆ ನೇರ ಹೊಣೆ ಅಶ್ವಿನಿ ಎಂದು ಟ್ವೀಟ್ ಮಾಡಿ, ವೈರಲ್ ಆದ ಬಳಿಕ ಸುದೀಪ್ ಹೆಸರಿಗೆ ಅಕೌಂಟ್ ಬದಲಿಸಿಕೊಂಡು ಸ್ಟಾರ್ ವಾರ್‌ಗೆ ಕಾರಣವಾಗಿದ್ದ ವಿಚಾರದ ಬಗ್ಗೆ ಸದ್ಯ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಾತನಾಡಿದ್ದಾರೆ.





