Mysore
27
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

‘UI’ ಟ್ರೇಲರ್ ನೋಡಿ ನನಗೆ ಶಾಕ್‍ ಆಯ್ತು; ಆಮೀರ್ ಖಾನ್‍ ಮೆಚ್ಚುಗೆ

ಉಪೇಂದ್ರ ಅಭಿಮಾನಿ ಬಳಗದಲ್ಲಿ ಮತ್ತು ಅವರನ್ನು ಮೆಚ್ಚುವವರ ಪೈಕಿ ಬೇರೆ ಭಾಷೆಯ ನಟ-ನಿರ್ದೇಶಕರು ನಿರ್ದೇಶಕರಿದ್ದಾರೆ. ಈಗಾಗಲೇ ತೆಲುಗಿನ ಹಲವು ನಟ-ನಿರ್ದೇಶಕರು ತಾವು ಉಪೇಂದ್ರ ಅಭಿಮಾನಿಗಳೆಂದು ಹೇಳಿಕೊಂಡಿದ್ದಾರೆ. ಈಗ ಮೊದಲ ಬಾರಿಗೆ ಬಾಲಿವುಡ್‍ ನಟ ಆಮೀರ್‍ ಖಾನ್‍ ಸಹ ತಾನು ಉಪೇಂದ್ರ ಅವರ ಅಭಿಮಾನಿ ಎಂದು ಹೇಳಿಕೊಳ್ಳುವುದರ ಜೊತೆಗೆ ಈ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಿದೆ. ಡಿ.20ರಂದು ಚಿತ್ರವು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಿರುವಾಗಲೇ, ಬಾಲಿವುಡ್‍ ನಟ ಆಮೀರ್‍ ಖಾನ್‍ ಖುದ್ದು ಉಪೇಂದ್ರರ ಜೊತೆಗೆ ನಿಂತು ಒಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಚಿತ್ರದ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಆಮೀರ್, ‘ಉಪೇಂದ್ರ ಬಹಳ ಚೆನ್ನಾಗಿ ಟ್ರೇಲರ್‍ ಮಾಡಿದ್ದಾರೆ. ಇದು ದೊಡ್ಡ ಹಿಟ್‍ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದಿ ಪ್ರೇಕ್ಷಕರು ಸಹ ಈ ಚಿತ್ರವನ್ನು ಇಷ್ಟಪಡುವುದರಲ್ಲಿ ಸಂಶಯವೇ ಇಲ್ಲ. ನನಗೆ ಟ್ರೇಲರ್‍ ನೋಡಿದಾಗ ನಿಜಕ್ಕೂ ಶಾಕ್‍ ಆಯ್ತು. ಅದ್ಭುತ ಟ್ರೇಲರ್‍. ನಿಜಕ್ಕೂ ಚೆನ್ನಾಗಿ ಮೂಡಿಬಂದಿದೆ. ನಿಮಗೆ ಒಳ್ಳೇಯದಾಗಬೇಕು, ಚಿತ್ರ ದೊಡ್ಡ ಯಶಸ್ಸು ಕಾಣಬೇಕು’ ಎಂದು ಹಾರೈಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉಪೇಂದ್ರ, ‘ಆಮೀರ್ ಖಾನ್‍ ಅವರನನು ಭೇಟಿ ಮಾಡುವ ನನ್ನ ಬಹು ವರ್ಷಗಳ ಕನಸು ಇಂದು ನನಸಾಗಿದೆ. ‘‘UI’ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ಇಷ್ಟಕ್ಕೂ ಉಪೇಂದ್ರ ಮತ್ತು ಆಮೀರ್‍ ಖಾನ್‍ ಭೇಟಿಯಾಗಿದ್ದು ಎಲ್ಲಿ ಎಂಬ ಪ್ರಶ್ನೆ ಸಹಜ. ರಜನಿಕಾಂತ್‍ ಅಭಿನಯದ ‘ಕೂಲಿ’ ಚಿತ್ರದಲ್ಲಿ ಉಪೇಂದ್ರ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಆಮೀರ್‍ ಖಾನ್‍ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಚಿತ್ರೀಕರಣ ನಡೆದಿದ್ದು, ಇದರಲ್ಲಿ ಉಪೇಂದ್ರ ಮತ್ತು ಆಮೀರ್‍ ಜೊತೆಯಾಗಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಮೀರ್ ಖಾನ್‍ ‘UI’ ಚಿತ್ರದ ಟ್ರೇಲರ್‍ ನೋಡಿದ್ದಷ್ಟೇ ಅಲ್ಲ, ಮೆಚ್ಚಿ ಮಾತನಾಡಿದ್ದಾರೆ.

Tags: