Mysore
18
broken clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ನಾನು ಗೋಮಾಂಸ ಅಥವಾ ಕೆಂಪು ಮಾಂಸವನ್ನು ಸೇವಿಸುವುದಿಲ್ಲ: ನಟಿ ಕಂಗನಾ

ನವದೆಹಲಿ: ಹಿಮಾಚಲ ಪ್ರದೇಶದ ಲೋಕಸಭೆ ಕ್ಷೇತ್ರ ಮಂಡಿಯ ಅಭ್ಯರ್ಥಿಯಾಗಿ ನಟಿ ಕಂಗನಾ ರಣಾವತ್ ಸ್ವರ್ಧಿಸುತ್ತಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ.

ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ನ ವಿಜಯ್ ವಾಡೆಟ್ಟಿವಾರ್ ಅವರು ಕಂಗನಾ ಅವರು ಗೋಮಾಂಸವನ್ನು ಇಷ್ಟಪಡುತ್ತಾರೆ ಹಾಗೂ ಸೇವನೆ ಮಾಡುತ್ತಾರೆ ಎಂದು ಎಕ್ಸ್​​ನಲ್ಲಿ ಹೇಳಿಕೆ ನೀಡಿದರು. ಈ ಹೇಳಿಕೆಯಿಂದ ಎಕ್ಸ್​​ನಲ್ಲಿ​​​ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅವರ ಹೇಳಿಕೆಗೆ ಎಕ್ಸ್​ನಲ್ಲೇ ಕಂಗನಾ ತಿರುಗೇಟು ನೀಡಿರುವ ಅವರು ತಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ ಎಂದಿದ್ದಾರೆ.

ಎಕ್ಸ್‌ನಲ್ಲೇನಿದೆ?
ನಾನು ಗೋಮಾಂಸ ಅಥವಾ ಇತರ ಯಾವುದೇ ರೀತಿಯ ಕೆಂಪು ಮಾಂಸವನ್ನು ಸೇವಿಸುವುದಿಲ್ಲ, ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ, ನಾನು ದಶಕಗಳಿಂದ ಯೋಗ ಮತ್ತು ಆಯುರ್ವೇದ ಜೀವನ ವಿಧಾನವನ್ನು ಪ್ರತಿಪಾದಿಸುತ್ತಿದ್ದೇನೆ ಮತ್ತು ಪ್ರಚಾರ ಮಾಡುತ್ತಿದ್ದೇನೆ ಈಗ ಅಂತಹ ತಂತ್ರಗಳು ಕಳಂಕಕ್ಕೆ ಕಾರಣವಾಗುವುದಿಲ್ಲ. ನನ್ನ ಚಿತ್ರ. ನನ್ನ ಜನರು ನನ್ನನ್ನು ತಿಳಿದಿದ್ದಾರೆ ಮತ್ತು ನಾನು ಹೆಮ್ಮೆಯ ಹಿಂದೂ ಎಂದು ಅವರಿಗೆ ತಿಳಿದಿದೆ ಮತ್ತು ಯಾವುದೂ ಅವರನ್ನು ದಾರಿ ತಪ್ಪಿಸುವುದಿಲ್ಲ, ಜೈ ಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.

Tags:
error: Content is protected !!