Mysore
21
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಗಿಮಿಕ್‍ ಮಾಡುವ ಅಗತ್ಯ ನನಗಿಲ್ಲ: ಸ್ಪಷ್ಟನೆ ಕೊಟ್ಟ ಕಿರಣ್ ರಾಜ್‍

ಕಿರಣ್‍ ರಾಜ್ ಅಭಿನಯದ ‘ರಾನಿ’ ಚಿತ್ರವು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಆಗಿದೆ.. ಈ ಮಧ್ಯೆ, ಕಳೆದ ಮಂಗಳವಾರ ಕಿರಣ್‍ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೆ ಒಳಗಾಗಿದ್ದು, ಅದರ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿವೆ. ಪ್ರಮುಖವಾಗಿ ಚಿತ್ರದ ಪ್ರಚಾರಕ್ಕಾಗಿ ಕಿರಣ್‍ ರಾಜ್‍ ಮಾಡಿದ ಗಿಮಿಕ್‍ ಇದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದ್ಯಾವುದರ ಬಗ್ಗೆಯೂ ಕಿರಣ್‍ ಮಾತನಾಡಿರಲಿಲ್ಲ. ಈ ವಿಷಯವಾಗಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

ಇತ್ತೀಚೆಗೆ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಇದು ಗಿಮಿಕ್‍ ಅಲ್ಲ ಮತ್ತು ಗಿಮಿಕ್‍ ಮಾಡುವ ಅವಶ್ಯಕತೆ ತನಿಗಿಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸಿರುವ ಅವರು, ‘ಇದು ಗಿಮಿಕ್ ಅಲ್ಲ. ಗಿಮಿಕ್‍ ಮಾಡುವ ಅವಶ್ಯಕತೆಯೂ ನನಗಿಲ್ಲ. ಅಪಘಾತದ ಸುದ್ದಿ ಹೇಗೆ ಹೊರಗೆ ಹೋಯಿತೋ ಗೊತ್ತಿಲ್ಲ. ಈ ವಿಷಯವನ್ನು ಹೇಳುವುದಕ್ಕೆ ನನಗೆ ಇಷ್ಟವಿರಲಿಲ್ಲ. ಏಕೆಂದರೆ, ನನ್ನ ತಂದೆ-ತಾಯಿ ಮತ್ತು ನನ್ನನ್ನು ಪ್ರೀತಿಸುವವರಿಗೆ ಈ ವಿಷಯ ಕೇಳಿ ಭಯಪಡುತ್ತಾರೆ. ಹಾಗಾಗಿ, ನಾನು ಸುಮ್ಮನಿದ್ದೆ. ನಿರ್ದೇಶಕರು ಮತ್ತು ನಿರ್ಮಾಪಕರು ಸಹ ಈ ಬಗ್ಗೆ ಮಾತನಾಡಿರಲಿಲ್ಲ. ಆದರೆ, ಚಿತ್ರತಂಡದವರೊಬ್ಬರು ಫೋಟೋಗಳನ್ನು ಸೋಷಿಯಲ್‍ ಮೀಡಿಯಾದಲ್ಲಿ ಹಾಕಿದರು. ಅದು ನನ್ನ ಕಂಟ್ರೋಲ್‍ನಲ್ಲಿ ಇಲ್ಲ. ನಿಜಕ್ಕೂ ಗಿಮಿಕ್‍ ಮಾಡಿದ್ದರೆ, ಈಗ್ಯಾಕೆ ಮಾಡುತ್ತಿದ್ದೆ? ಚಿತ್ರದ ಬಿಡುಗಡೆಗೆ ನಾಲ್ಕು ವಾರಗಳು ಇದೆ ಎನ್ನುವಾಗಲೇ ಮಾಡುತ್ತಿದೆ. ಇದರಿಂದ ಸಿಂಪಥಿಯಾದರೂ ಸಿಗುತ್ತಿತ್ತು’ ಎಂದರು ಕಿರಣ್‍ ರಾಜ್‍.

ಅಂದು ಏನಾಯಿತು ಎಂದು ವಿವರಿಸಿದ ಅವರು, ‘ಮಂಗಳವಾರ ಮಧ್ಯಾಹ್ನ ಗ್ಲೋಬಲ್‍ ಮಾಲ್‍ನಲ್ಲಿ ನಡೆದ ವಿಶೇಷ ಪತ್ರಿಕಾ ಪ್ರದರ್ಶನ ಮುಗಿಸಿಕೊಂಡು ಸಂಜೆ ಕೆಂಗೇರಿಯ ಅನಾಥಾಶ್ರಮಕ್ಕೆ ಹೋಗಿದ್ದೆ. ವಾಪಸ್ಸು ಬರುವ ಸಂದರ್ಭದಲ್ಲಿ ಕಾರು ಅಪಘಾತವಾಗಿ, ನನ್ನ ಎದೆ ಭಾಗಕ್ಕೆ ಪೆಟ್ಟು ಬಿದ್ದಿತ್ತು. ಅಪಘಾತವಾದಾಗ ನಾನು ಹಿಂದೆ ಕೂತಿದ್ದೆ. ಲ್ಯಾಪ್‍ಟಾಪ್‍ನಲ್ಲಿ ಕೆಲಸ ಮಾಡುತ್ತಿದ್ದೆ. ಅಪಘಾತವಾದ ರಭಸಕ್ಕೆ ಬ್ಲಾಕ್‍ಔಟ್‍ ಆಯಿತು. ತಕ್ಷಣವೇ ನನ್ನ ನಿರ್ಮಾಪಕರು ಆಸ್ಪತ್ರೆಗೆ ಸೇರಿಸಿದ್ದರು. ಪೇನ್‍ ಕಿಲ್ಲರ್‍ಗಳನ್ನು ಕೊಟ್ಟಿದ್ದರು. ಮರುದಿನ ಮಧ್ಯಾಹ್ನ ನಾನು ಸುರಕ್ಷಿತರಾಗಿರುವುದರ ಕುರಿತು ವೀಡಿಯೋ ಮೂಲಕ ಹೇಳಿದ್ದೆ’ ಎಂದರು.

ಸುಮ್ಮನೆ ಸುದ್ದಿ ಮಾಡುವ ಮೊದಲು ಸ್ವಲ್ಪ ಯೋಚಿಸಬೇಕಿತ್ತು ಎನ್ನುವ ಅವರು, ‘ನಾನು ಮುವಾಯ್‍ ಥಾಯ್‍ ಕಲಿತವನು. ಪೇನ್‍ಕಿಲ್ಲರ್ ತಗೊಂಡರೆ ಸರಿ ಹೋಗುತ್ತದೆ. ಆ ನಂತರ ಆಸ್ಪತ್ರೆಯಲ್ಲಿ ವೈದ್ಯರು 12 ಗಂಟೆಗಳ ಕಾಲ ಕಾದು ನೋಡೋಣ ಎಂದು ಹೇಳಿದ್ದಿಕ್ಕೆ ಆಸ್ಪತ್ರೆಯಲ್ಲಿ ಇರಬೇಕಾಯಿತು’ ಎಂದರು.

Tags: