Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಪೃಥ್ವಿರಾಜ್‍ ಸುಕುಮಾರನ್‍ ಹೊಸ ಚಿತ್ರಕ್ಕೆ ಹೊಂಬಾಳೆ ಫಿಲಂಸ್‍ ಬೆಂಬಲ

ಮಲಯಾಳಂನ ಜನಪ್ರಿಯ ನಟ ಪೃಥ್ವಿರಾಜ್‍ ಸುಕುಮಾರನ್ ಅಭಿನಯದಲ್ಲಿ ‘ಟೈಸನ್‍’ ಎಂಬ ಪ್ಯಾನ್‍ ಇಂಡಿಯಾದ ಚಿತ್ರವನ್ನು ನಿರ್ಮಿಸುವುದಾಗಿ ಹೊಂಬಾಳೆ ಫಿಲಂಸ್‍ ಘೋಷಿಸಿತ್ತು. ಆದರೆ, ಆ ಚಿತ್ರದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ.

ಈ ಮಧ್ಯೆ, ಪೃಥ್ವಿರಾಜ್‍ ಸುಕುಮಾರನ್‍ ನಿರ್ದೇಶನದ ‘L2E: ಎಂಪುರಾನ್’ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್‍ ಸಂಸ್ಥೆಯು ವಿತರಿಸುತ್ತಿದೆ. ಈ ಚಿತ್ರ ಮಾರ್ಚ್.27ರಂದು ಮಲಯಾಳಂ ಅಲ್ಲದೆ, ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

‘L2E: ಎಂಪುರಾನ್’ ಚಿತ್ರವು 2019ರಲ್ಲಿ ಬಿಡುಗಡೆಯಾದ ‘ಲೂಸಿಫರ್‍’ ಚಿತ್ರದ ಮುಂದುವರೆದ ಭಾಗವಾಗಿದ್ದು, ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ನಟ ಪೃಥ್ವಿರಾಜ್‍ ಸುಕುಮಾರನ್‍ ಮೊದಲ ಬಾರಿಗೆ ನಿರ್ದೇಶಕರಾದರು. ಈ ಚಿತ್ರದ ಯಶಸ್ಸಿನಿಂದ ಪ್ರೇರಿತರಾದ ಪೃಥ್ವಿರಾಜ್‍, ಈ ಚಿತ್ರದ ಮುಂದುರೆದ ಭಾಗವನ್ನು ‍ಘೋಷಿಸಿದ್ದರು.

ಈ ಚಿತ್ರದಲ್ಲಿ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಟೋವಿನೋ ಥಾಮಸ್, ಮಂಜು ವಾರಿಯರ್‍, ಇಂದ್ರಜಿತ್‍ ಸುಕುಮಾರನ್‍, ಅಭಿಮನ್ಯು ಸಿಂಗ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ವತಃ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ವಿಶೇಷವೆಂದರೆ, ಹೊಂಬಾಳೆ ಫಿಲಂಸ್‍ ನಿರ್ಮಾಣದ ‘ಕೆಜಿಎಫ್‍ 1’, ‘ಕೆಜಿಎಫ್‍ 2’ ಮತ್ತು ‘ಕಾಂತಾರ’ ಚಿತ್ರಗಳನ್ನು ಕೇರಳದಲ್ಲಿ ಪೃಥ್ವಿರಾಜ್‍ ಸುಕುಮಾರನ್‍ ವಿತರಿಸಿದ್ದರು. ಅದಕ್ಕೆ ಪ್ರತಿಯಾಗಿ ಪೃಥ್ವಿರಾಜ್‌ ಅಭಿನಯದ ‘ಆಡುಜೀವಿತಂ’ (ದಿ ಗೋಟ್‌ ಲೈಫ್‌) ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲಂಸ್‌ ವಿತರಣೆ ಮಾಡಿತು. ಈಗ ‘L2E: ಎಂಪುರಾನ್’ ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸುತ್ತಿದೆ.

Tags:
error: Content is protected !!