Mysore
29
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪ: ರಕ್ಷಿತ್‌ ಶೆಟ್ಟಿಗೆ 20 ಲಕ್ಷ ರೂ ಠೇವಣಿ ಇಡುವಂತೆ ನಿರ್ದೇಶನ

ನವದೆಹಲಿ: ಕಾಪಿ ರೈಟ್ಸ್‌ ಉಲ್ಲಂಘನೆ ಆರೋಪದಡಿ ದೆಹಲಿ ಹೈಕೋರ್ಟ್‌ ರಕ್ಷಿತ್‌ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾತಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ.

ಅನುಮತಿ ಪಡೆಯದೇ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ ಎರಡು ಹಾಡುಗಳನ್ನು ಬಳಕೆ ಮಾಡಿದ್ದಕ್ಕಾಗಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಹಿನ್ನೆಲೆಯಲ್ಲಿ ಇಂದು ದೆಹಲಿ ಹೈಕೋರ್ಟ್‌ ರಕ್ಷಿತ್‌ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ.

ಬ್ಯಾಚುಲರ್‌ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್‌ ಶೆಟ್ಟಿ ಅವರು, ಎಂಆರ್‌ಟಿ ಹಕ್ಕು ಹೊಂದಿರುವ ನ್ಯಾಯ ಎಲ್ಲಿದೆ ಹಾಗೂ ಒಮ್ಮೆ ನಿನ್ನನ್ನು ಹಾಡನ್ನು ಬಳಕೆ ಮಾಡಿದ್ದರು. ಅನುಮತಿ ಪಡೆಯದೇ ಹಾಡನ್ನು ಬಳಸಿದ್ದನ್ನು ಸಹ ರಕ್ಷಿತ್ ಶೆಟ್ಟಿ ಒಪ್ಪಿಕೊಂಡಿದ್ದರು. ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ ಎಂದು ಪ್ರಶ್ನೆ ಮಾಡಿದ್ದರು.

ಇದನ್ನು ಪ್ರಶ್ನಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ರಕ್ಷಿತ್‌ ಶೆಟ್ಟಿ ಹಾಗೂ ಪರಂವಾಗೆ ನೋಟಿಸ್‌ ನೀಡಿತ್ತು. ಈ ನೋಟಿಸ್‌ಗೆ ರಕ್ಷಿತ್‌ ಶೆಟ್ಟಿ ಕೋರ್ಟ್‌ಗೆ ಹಾಜರಾಗದ ಕಾರಣ ಸೋಷಿಯಲ್‌ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ ತೆಗೆದು ಹಾಕಬೇಕು. ಇದಲ್ಲದೇ 20 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು ಕೋರ್ಟ್‌ ನಿರ್ದೇಶನ ನೀಡಿದೆ.

 

Tags:
error: Content is protected !!