ಆಂಧ್ರಪ್ರದೇಶ: ಡ್ಯಾನ್ಸ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರು ಗಿನ್ನಿಸ್‌ನಲ್ಲಿ ದಾಖಲೆ ಬರೆದಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರು ಟಾಲಿವುಡ್‌ನಲ್ಲಿ ಅನೇಕ ಸಾಧನೆಗಳನ್ನು ಮತ್ತು ದಾಖಲೆ ಸೃಷ್ಟಿಸಿದ್ದಾರೆ.
ಚಿರಂಜೀವಿ ತಮ್ಮ ಚಿತ್ರಗಳ ಮೂಲಕ ಡ್ಯಾನ್ಸ್ ವಿಷಯದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.
ಟಾಲಿವುಡ್‌ನಲ್ಲಿ ಚಿರಂಜೀವಿ ಬರುವುದಕ್ಕೂ ಮೊದಲು ನೃತ್ಯಗಳು ಒಂದು ರೀತಿ ಇದ್ದವು. ಅದನ್ನು ಸಂಪೂರ್ಣವಾಗಿ ಬದಲಾಯಿಸಿ ಚಿರಂಜೀವಿ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿರಂಜೀವಿಗೆ ಮತ್ತೊಂದು ಗರಿ ಮೂಡಿದ್ದು, ನೃತ್ಯಕ್ಕೆ ಗಿನ್ನಿಸ್ ವಿಶ್ವ ದಾಖಲೆ ಸಿಕ್ಕಿದೆ. ಸಿನಿಮಾಗಳಲ್ಲಿ ಅತಿ ಹೆಚ್ಚು ಹಾಡುಗಳಿಗೆ ನೃತ್ಯ ಮಾಡಿದ ನಟ ಎಂಬ ಹೆಗ್ಗಳಿಕೆಗೆ ಚಿರಂಜೀವಿ ಪಾತ್ರರಾಗಿರುವ ಹಿನ್ನೆಲೆಯಲ್ಲಿ ಗಿನ್ನಿಸ್ ವಿಶ್ವ ದಾಖಲೆಯೊಂದಿಗೆ ಅವರನ್ನು ಸನ್ಮಾನಿಸಲಾಗುತ್ತಿದೆ.