ಈ ಹಿಂದೆ ʼಲವ್ ಇನ್ ಮಂಡ್ಯʼ ಚಿತ್ರ ನಿರ್ದೇಶಿಸಿದ್ದ ಅರಸು ಅಂತಾರೆ ಈಗ ಹೊಸ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದು, ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಗಣೇಶ್‌ಗೆ ಜೋಡಿಯಾಗಿ ತೆಲುಗಿನ ʼಹನುಮಾನ್ʼ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯರ್ ನಟಿಸುತ್ತಿದ್ದು, ಈ ಚಿತ್ರದೊಂದಿಗೆ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ.
ಬಹಳ ಹಿಂದೆಯೇ ಅರಸು ಅಂತಾರೆ ಈ ಕಥೆ ಹೇಳಿದ್ದರು. ಮುಂದೂಡತ್ತಲೇ ಬಂದಿದೆ. ಈಗ ಈ ಸಿನಿಮಾಗೆ ಕಾಲ ಕೂಡಿ ಬಂದಿದೆ. ಹಾಸ್ಯಮಯ ಕಥೆಯೊಂದಿಗೆ ಕುಟುಂಬವೇ ಕುಳಿತು ನೋಡಬಹುದಾದ ಚಿತ್ರವಾಗಲಿದೆ ಎಂದು ಗಣೇಶ್ ಹೇಳಿದರು.
ಒಂದು ಸಿನಿಮಾ ಹಿಟ್ ಕೊಟ್ಟ ಮೇಲೆ ಮತ್ತೊಂದು ಚಿತ್ರಕ್ಕೆ ಇಷ್ಟು ಸಮಯ ತೆಗೆದುಕೊಂಡೆ. ಚಿತ್ರದ ಶೀರ್ಷಿಕೆ ಮುಂತಾದ ವಿವರಗಳನ್ನು ಮುಂದಿನ ಹಂತದಲ್ಲಿ ನೀಡುತ್ತೇವೆ ಎಂದು ನಿರ್ದೇಶಕ ಅರಸು ಅಂತಾರೆ ತಿಳಿಸಿದರು.
ಈ ಚಿತ್ರಕ್ಕೆ ರವಿಕುಮಾರ್ ಭದ್ರವಾತಿ ಬಂಡವಾಳ ಹೂಡಿದ್ದು, ರಂಗಾಯಣ ರಘು, ರವಿಶಂಕರ್ ಗೌಡ, ಕಾಕ್ರೋಚ್ ಸುಧಿ ಮುಂತಾದವರು ಚಿತ್ರದಲ್ಲಿದ್ದಾರೆ. ಸುಜ್ಞಾನ್ ಛಾಯಾಚಿತ್ರಗ್ರಹಣ, ಅಕ್ಷಯ್ ಸಂಕಲನ ಚಿತ್ರಕ್ಕಿದೆ.





