ಬಾಲಿವುಡ್‌ನಲ್ಲಿ ಸದಾ ಆಕ್ಟೀವ್ ಆಗಿರುವ ಜೋಡಿ ಎಂದರೆ ರಿತೇಶ್ ದೇಶ್‌ಮುಖ್ ಹಾಗೂ ಜೆನಿಲಿಯಾ ಡಿಸೋಜಾ ಜೋಡಿ. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿ ಬಿಔನ್ ಅಂಗಳದಲ್ಲಿನ ಕ್ಯೂಟ್ ಕಪಲ್ ಎಂದೇ ಹೆಸರಾಗಿದ್ದಾರೆ.
ಸದಾ ಒಂದಿಲ್ಲೊಂದು ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಈ ಜೋಡಿ ಈಗ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಲೆಬ್ರೆಟಿ ಜೋಡಿಯು ತಮ್ಮ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಂಡಿದ್ದು, ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಿತೇಶ್ ಹಾಗೂ ಜೆನಿಲಿಯಾ ಜೋಡಿ ತಮ್ಮ ಅಂಗಾಂಗಳನ್ನು ದಾನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಈ ಜೋಡಿಗೆ ಧನ್ಯವಾದ ಹೇಳಿದ್ದಾರೆ.
ಈ ಜೋಡಿಯ ನಿರ್ಧಾರದ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸ್ಥೆ, “ಜುಲೈನಲ್ಲಿ ನಡೆಯುತ್ತಿರುವ ಅಂಗಾಂಗ ದಾನದ ತಿಂಗಳಿನಲ್ಲಿ ತಮ್ಮ ಅಂಗಾಂಗಗಳನ್ನು ದಾನ ಮಾಡಲು ವಾಗ್ದಾನ ಮಾಡಿದ ಬಾಲಿವುಡ್ ತಾರೆ ದಂಪತಿಗಳಾದ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಅವರಿಗೆ ಧನ್ಯವಾದಗಳು. ಅವರ ಗೆಸ್ಚರ್ ಇತರರನ್ನು ಉದಾತ್ತ ಕಾರಣದೊಂದಿಗೆ ಸಂಪರ್ಕಿಸಲು ಪ್ರೇರೇಪಿಸುತ್ತದೆ” ಎಂದು ಬರೆದುಕೊಂಡು ಬಿಟೌನ್ ಜೋಡಿವ ವಾಗ್ದಾನದ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.





