Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’

ಈ ಹಿಂದೆ ‘ಹನುಮಾನ್’ ಸಿನಿಮಾ ನಿರ್ದೇಶಿಸಿ ಮೆಚ್ಚುಗೆಗೆ ಪಾತ್ರವಾಗಿದ್ದ ಪ್ರಶಾಂತ್ ವರ್ಮಾ, ‘ಹನುಮಾನ್ 2’ ಜೊತೆಗೆ ನಂದಮೂರಿ ಬಾಲಕೃಷ್ಣ ಅವರ ಮಗ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಭಾರತದ ಮೊದಲ ಮಹಿಳಾ ಸೂಪರ್ ಹೀರೋ ‘ಮಹಾಕಾಳಿ’ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ.

ಪ್ರಶಾಂತ್ ವರ್ಮಾ ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ನಡಿ ಮೂರನೇ ಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದಾರೆ. ‘ಮಹಾಕಾಳಿ’ ಚಿತ್ರಕ್ಕೆ ಪ್ರಶಾಂತ್ ಕಥೆ ಬರೆದಿದ್ದು, ಈ ಹಿಂದೆ ‘ಮಾರ್ಟಿನ್ ಲೂಥರ್ ಕಿಂಗ್’ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಕೊಲ್ಲೂರು, ‘ಮಹಾಕಾಳಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಮಹಾಕಾಳಿ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹುಡುಗಿಯೊಬ್ಬಳು ಹುಲಿಗೆ ತನ್ನ ಹಣೆ ಕೊಟ್ಟು ನಿಂತಿರುವ ಲುಕ್ ನ್ನು ಅನಾವರಣ ಮಾಡಲಾಗಿದೆ.

‘ಮಹಾಕಾಳಿ’ ಚಿತ್ರವನ್ನು ಆರ್.ಕೆ.ಎಂಡಿ ಸ್ಟುಡಿಯೋಸ್ ಬ್ಯಾನರ್ ನಡಿ ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

‘ಮಹಾಕಾಳಿ’ ಚಿತ್ರವು ಭಾರತದ ಹಲವು ಭಾಷೆಗಳಲ್ಲದೆ, ವಿವಿಧ ವಿದೇಶಿ ಭಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ಸಿಗುವ ನಿರೀಕ್ಷೆ ಇದೆ.

Tags: