ಬೆಂಗಳೂರು: ನಟಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ಆತನ ಮಾಡಿದ್ದಾರೆ ಎಂಬ ಪ್ರಕರಣದ ಅಡಿಯಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ ದರ್ಶನ್ ಬಂಧನಕ್ಕೊಳಗಾಗಿದ್ದು, ಪೊಲೀಸರು ಪ್ರಕರಣ ಕುರಿತು ಮತ್ತಷ್ಟು ಮಾಹಿತಿಗಳನ್ನು ಕಲೆಹಾಕತೊಡಗಿದ್ದಾರೆ.
ಘಟನೆ ಸಂಬಂಧ ಸ್ಕಾರ್ಪಿಯೊ ಕಾರು ಹಾಗೂ ಒಂದು ಜೀಪನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪೈಕಿ ಕೆಂಪು ಬಣ್ಣದ ಜೀಪ್‌ನಲ್ಲಿ ಮಹಿಳೆಯರು ಬಳಸುವ ಬ್ಯಾಗ್ ಇರುವುದು ಪತ್ತೆಯಾಗಿದೆ. ಈ ಬ್ಯಾಗ್ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ ಹಾಗೂ ಈ ಕುರಿತ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.





