Mysore
21
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

ಪ್ರವಾಸದಲ್ಲಿ ತಂದೆ-ಮಗನ ಭಾಂದವ್ಯ; ‘ಫಾದರ್ಸ್ ಡೇ’ ಬಿಡುಗಡೆಗೆ ಸಿದ್ಧ

fathers day

ಈ ಹಿಂದೆ ‘ಆಚಾರ್ ಆ್ಯಂಡ್‍ ಕೋ’, ‘ಅನಾಮಧ್ಯೇಯ ಅಶೋಕ್‍ ಕುಮಾರ್’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಹರ್ಷಿಲ್‍ ಕೌಶಿಕ್‍, ಸದ್ದಿಲ್ಲದೆ ಹೊಸ ಚಿತ್ರದೊಂದಿಗೆ ಬಂದಿದ್ದಾರೆ. ಈ ಬಾರಿ ಅವರು ತಂದೆ-ಮಗನ ಭಾಂದವ್ಯ ಸಾರುವ ‘ಫಾದರ್ಸ್ ಡೇ’ ಎಂಬ ಚಿತ್ರದಲ್ಲಿ ನಟಿಸಿದ್ದು, ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ.

‘ಫಾದರ್ಸ್ ಡೇ’ ಚಿತ್ರವನ್ನು Eleven Elements ಮತ್ತು Rectangle Studios ಸಂಸ್ಥೆಗಳಡಿ ರಾಜಾರಾಮ್ ರಾಜೇಂದ್ರನ್ ಮತ್ತು ಯೋಗೇಶ್‍ ಶ್ರೀನಿವಾಸ್‍ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ರಾಜಾರಾಮ್ ರಾಜೇಂದ್ರನ್ ನಿರ್ದೇಶಿಸಿದ್ದು, ಹರ್ಷಿಲ್ ಕೌಶಿಕ್ ಹಾಗೂ ‘ಶ್ರೀರಸ್ತು ಶುಭಮಸ್ತು’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅಜಿತ್ ಹಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜನಪ್ರಿಯ ಗಾಯಕ ALL OK ಹಾಗೂ ಸಾಮ್ರಾಗ್ನಿ ರಾಜನ್ ಸಹ ಈ ಚಿತ್ರದಲ್ಲಿದ್ದಾರೆ.

ಇದೊಂದು ಪ್ರವಾಸ ಕಥನದ ಚಿತ್ರವಾಗಿದ್ದು, ಕನ್ನಡದ ಮೊದಲ ಬೈಕರ್ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರದ ಕಥೆ ಇಬ್ಬರು ಬೈಕರ್‍ಗಳ ಸುತ್ತ ಸಾಗುತ್ತದೆ. ಇಬ್ಬರು ಸಹ ಪಯಣಿಗರಾಗಿದ್ದರೂ, ತಾವಿಬ್ಬರು ತಂದೆ – ಮಗ ಎಂದು ಕೊನೆಯವರೆಗೂ ತಿಳಿಯುವುದಿಲ್ಲ‌. ಅಂತಹ ಕೌತುಕ ಚಿತ್ರಕಥೆ ಹೊಂದಿರುವ ‘ಫಾದರ್ಸ್ ಡೇ’ ಚಿತ್ರವು ತಂದೆ – ಮಗನ ಬಾಂಧವ್ಯದ ಸುತ್ತ ಸಾಗುತ್ತದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ತೆರೆಗೆ ಬರಲು ಅಣಿಯಾಗುತ್ತಿದೆ. ಬಿಡುಗಡೆಗೂ ಪೂರ್ವಭಾವಿಯಾಗಿ ಟೀಸರ್ ಬಿಡುಗಡೆಯಾಗಿದೆ. ಜ್ಯೋತ್ಸ್ನಾ ಪಣಿಕರ್ ಸಂಕಲನ ಹಾಗೂ ಜೋ ಪಣಿಕರ್‍ ಹಾಗೂ ALL OK ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!