Mysore
66
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಬಿ ಪ್ಲಸ್, ಸಿ ಪ್ಲಸ್‍ ಪಡೆಯುತ್ತಿದ್ದ ‘ದುನಿಯಾ’ ವಿಜಯ್‍ಗೆ ‘ಎ’ ಸಿಕ್ಕಿತು

‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಸೆನ್ಸಾರ್‍ ಸಹ ಮುಗಿದು, ಬಿಡುಗಡೆಗೆ ಸಜ್ಜಾಗುತ್ತಿದೆ. ಚಿತ್ರವು ಆಗಸ್ಟ್ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಪ್ರಚಾರವನ್ನು ಈಗಾಗಲೇ ಪ್ರಾರಂಭಿಸಿದೆ.

ಅಂದಹಾಗೆ, ಈ ಚಿತ್ರಕ್ಕೆ ಸೆನ್ಸಾರ್‍ ಮಂಡಳಿಯವರು ‘ಎ’ ಪ್ರಮಾಣಪತ್ರ ನೀಡಿದ್ದಾರೆ. ವಿಜಯ್‍ ಅಭಿನಯದ ‘ಸಲಗ’ ಚಿತ್ರಕ್ಕೂ ‘ಎ’ ಸರ್ಟಿಫಿಕೇಟ್‍ ಸಿಕ್ಕಿತ್ತು. ಅದಕ್ಕೆ ಸರಿಯಾಗಿ ಚಿತ್ರದಲ್ಲಿ ಸಾಕಷ್ಟು ಹಿಂಸೆ, ಕ್ರೌರ್ಯ ಮತ್ತು ರಕ್ತಪಾತವಿತ್ತು. ‘ಭೀಮ’ ಸಹ ಅದೇ ಜಾನರ್‍ನ ಚಿತ್ರವಾದ್ದರಿಂದ ಈ ಚಿತ್ರಕ್ಕೂ ‘ಎ’ ಸಿಗಬಹುದು ಎಂದು ಹಲವರು ಅಂದಾಜಿಸಿದ್ದರು. ಅದೀಗ ನಿಜವಾಗಿದೆ.

ಈ ಕುರಿತು ಮಾತನಾಡುವ ‘ದುನಿಯಾ’ ವಿಜಯ್‍, ‘ಈ ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸಾಮಾಜಿಕ ಸಂದೇಶವಿರುವ ಈ ಚಿತ್ರ ಎಲ್ಲರಲ್ಲೂ ಜಾಗೃತಿ ಮೂಡಿಸುವಂತೆ ಆಗಬೇಕು. ನಾನು ಹಾಗೂ ಸಂಭಾಷಣೆ ಕಾರ ಮಾಸ್ತಿ ಸೇರಿ ಕಥೆ ಹಂತದಿಂದ ಹಿಡಿದು ಚಿತ್ರಕಥೆ, ಸಂಭಾಷಣೆಯಿಂದ ಪ್ರತಿ ಹಂತದಲ್ಲೂ ಬಹಳ ಶ್ರಮ ಪಟ್ಟು ಕೆಲಸ ಮಾಡಿದ್ದೇವೆ. ಶಾಲಾ ದಿನಗಳಿಂದಲೂ ಬಿ ಪ್ಲಸ್, ಸಿ ಪ್ಲಸ್ ಅಂಕಗಳನ್ನು ಪಡೆಯುತ್ತಿದೆ. ಈಗ ‘ಭೀಮ’ ಚಿತ್ರದಲ್ಲಿ ‘ಎ’ ಸಿಕ್ಕಿದೆ. ಚಿತ್ರದ ಸಂಭಾಷಣೆ ವಿಚಾರವಾಗಿ ಒಂದಷ್ಟು ಕಟ್ಸ್ , ಮ್ಯೂಟ್ಸ್ ಮಾಡಲು ಸೆನ್ಸಾರ್‍ನವರು ಹೇಳಿದ್ದಾರೆ. ಅದರಂತೆ ಎಲ್ಲವನ್ನೂ ಮಾಡುತ್ತೇವೆ’ ಎಂದರು.

ಈ ಚಿತ್ರಕ್ಕಾಗಿ ವಿಜಯ್‍ ಹೆಚ್ಚಾಗಿ ಬೆಂಗಳೂರಿನ ಸ್ಲಂಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ. ‘ನನಗೆ ಸಹಜತೆ ಬೇಕಿತ್ತು. ಹಾಗಾಗಿ, ಹಾಡು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಬಿಟ್ಟರೆ, ಮಿಕ್ಕಂತೆ ಎಲ್ಲವನ್ನೂ ನಾವು ನೈಜ ಪರಿಸರದಲ್ಲೇ ಮಾಡಿದ್ದೇವೆ. ಸಾಕಷ್ಟು ಸ್ಲಂ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ 70ಕ್ಕೂ ಹೆಚ್ಚು ಜನ ಹೊಸಬರು ನಟಿಸಿದ್ದಾರೆ. ರಾತ್ರಿ ಹೊತ್ತು ಚಿತ್ರೀಕರಣ ಜಾಸ್ತಿ ಇದೆ. 125 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಕೆಲವು ಕಡೆ ಹೊಸಬರನ್ನಿಟ್ಟುಕೊಂಡು ಚಿತ್ರೀಕರಣ ಮಾಡುವುದು ನಿಜಕ್ಕೂ ಕಷ್ಟದ ಕೆಲಸವಾಗಿತ್ತು. ಈ ಚಿತ್ರದಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ’ ಎಂದರು.

‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜೊತೆಯಾಗಿ ನಿರ್ಮಿಸಿದ್ದು, ಚಿತ್ರಕ್ಕೆ ಚರಣ್ರಾಜ್ ಸಂಗೀತ ಮತ್ತು ಶಿವಸೇನಾ ಛಾಯಾಗ್ರಹಣವಿದೆ. ವಿಜಯ್‍ಗೆ ನಾಯಕಿಯಾಗಿ ಅಶ್ವಿನಿ ನಟಿಸಿದ್ದಾರೆ. ಮಿಕ್ಕಂತೆ ರಂಗಾಯಣ ರಘು, ಅಚ್ಯುತ್‍ ಕುಮಾರ್‍, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ.

Tags:
error: Content is protected !!