ಬೆಂಗಳೂರು: ಕಾಟೇರಾ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮೊಂಥೆರೋ ಅವರು ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಇಂದು ಬೆಳಿಗ್ಗೆ 10.50 ರಿಂದ 11.35ರ ಶುಭ ತುಲಾ ಲಘ್ನದಲ್ಲಿ ಈ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿಂದೂ ಸಂಪ್ರದಾಯದಂತೆ ಮಾಂಗಲ್ಯ ಧಾರಣೆ ಮೂಲಕ ನಡೆದ ಮದುವೆಗೆ ಕನ್ನಡ ಚಿತ್ರರಂಗ ಹಲವಾರು ಗಣ್ಯರು ಸಾಕ್ಷಿಯಾದರು.
ಇನ್ನು ಈ ಮದುವೆ ಹಾಲ್‌ನ ಔಟ್ ಡೋರನ್ನು ಫಿಲ್ಮಂ ಅವಾರ್ಡ್ ಫಂಕ್ಷನ್ ಮಾದರಿಯಲ್ಲಿ ನಿರ್ಮಿಸಿದ್ದು, 185ಕ್ಕೂ ವಿವಿಧ ಬಗೆಯ ಖಾದ್ಯಗಳನ್ನು ಮದುವೆಯಲ್ಲಿ ಮಾಡಲಾಗಿದೆ. ಇನ್ನು ತರುಣ್ ಅವರ ಮದುವೆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಯ್ಯೂಟೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಸುಧೀರ್ ಗೆಳೆಯರಾದ ನೆನಪಿರಲಿ ಪ್ರೇಮ್, ನಟ ಶರಣ್, ಮಾಸ್ಟರ್ ಆನಂದ್ ಸೇರಿದಂತೆ ಸ್ನೇಹ ಬಳಗ ಹಾಗೂ ಗಣ್ಯರ ದಂಡೇ ಮದುವೆ ಸಮಾರಂಭದಲ್ಲಿ ಭಾಗಿಯಾಗಿದೆ.





