Mysore
19
clear sky

Social Media

ಭಾನುವಾರ, 04 ಜನವರಿ 2026
Light
Dark

ದರ್ಶನ್‌ ಜೊತೆ ಮನಸ್ತಾಪ ಇಲ್ಲ ಎಂದ ದಿನಕರ್‌ ತೂಗುದೀಪ

ಬೆಂಗಳೂರು: ನಟ ದರ್ಶನ್‌ ಅವರ ಜೊತೆಗಿನ ಮನಸ್ತಾಪದ ಬಗ್ಗೆ ಕೊನೆಗೂ ಮೌನ ಮುರಿದು, ನನ್ನ ಹಾಗೂ ಅಣ್ಣ ದರ್ಶನ್‌ ನಡುವೆ ಯಾವ ಮನಸ್ತಾಪವೂ ಇಲ್ಲ ಎಂದು ನಿರ್ದೇಶಕ ದಿನಕರ್‌ ತೂಗುದೀಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಡಿಸೆಂಬರ್.28)‌ ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಅಣ್ಣ-ತಮ್ಮ ಬೇರೆಯಾಗಿದ್ದೀವಿ ಎಂದು ಯಾರು ಹೇಳಿದ್ದು? ಕುಟುಂಬ ಅಂದಮೇಲೆ ಚಿಕ್ಕಪುಟ್ಟ ಮನಸ್ತಾಪಗಳಿರುತ್ತವೆ. ಹಾಗಂತ ಬೇರೆ ಬೇರೆಯಾಗಿ ದೂರವಾಗುವ ಮಾತಿಲ್ಲ. ನಾನು ಹಾಗೂ ದರ್ಶನ್‌ ಯಾವಾಗಲೂ ಮಾತನಾಡುತ್ತೇನೆ ಇರುತ್ತೇವೆ. ಅಲ್ಲದೇ ಅತ್ತಿಗೆ ವಿಜಯಲಕ್ಷ್ಮೀ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇನೆ ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ದರ್ಶನ್‌ ಸಿನಿಮಾಗಳ ಚೀತ್ರಿಕರಣದ ಬಗ್ಗೆ ಮಾತನಾಡಿದ ಅವರು, ದರ್ಶನ್‌ ಅವರಿಗೆ ತೀವ್ರ ಬೆನ್ನು ನೋವಿದೆ. ಅವರ ದೇಹ ಸಾಥ್‌ ನೀಡಿದಾಗ ಚೀತ್ರಿಕರಣವನ್ನು ಪ್ರಾರಂಭಿಸುತ್ತಾರೆ. ಸದ್ಯಕ್ಕೆ ಅವರಿಗೆ ಮೈಸೂರಿನ ಮನೆಯಲ್ಲೇ ಫಿಜಿಯೋಥೆರಪಿ ಚಿಕಿತ್ಸೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ದರ್ಶನ್‌ ಅವರ ಎಲ್ಲಾ ಸಿನಿಮಾಗಳ ಚೀತ್ರಿಕರಣ ಮುಗಿದ ನಂತರ ನಾನು ಹಾಗೂ ದರ್ಶನ್‌ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ.

Tags:
error: Content is protected !!